ಬೆಳ್ತಂಗಡಿ ತಾಲೂಕು ಶಿರ್ಲಾಲು ಕುಲಾಲ್ ಸಂಘದ ವತಿಯಿಂದ ನಡೆಯುವ ಕ್ರಿಕೆಟ್ ಪಂದ್ಯಾಟದ ಬಗ್ಗೆ ಅಳದಂಗಡಿ ಸೋಮನತಥೇಶ್ವರಿ ದೇವಸ್ಥಾನದ ವಠಾರದಲ್ಲಿ ಸಭೆ ಸೇರಿ ಕಾರ್ಯಕ್ರಮ ದ ಪೂರ್ವ ತಯಾರಿ ಬಗ್ಗೆ ಮಾತುಕತೆ ನಡೆಯಿತು. ಈ ಕ್ರೀಡಾಕೂಟದ ಅಧ್ಯಕ್ಷರು ಆಗಿ ಮೋಹನ್ ಬಂಗೇರ (ಮಿಲಿಟರಿ ) ಹಾಗೂ ಕಾರ್ಯದರ್ಶಿಯಾಗಿ ಹರೀಶ್ ಕುಲಾಲ್ ಕೆದ್ದು ಒಳ್ಳೆಯ ಸಂಘಟಕರು ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರು ಆಗಿ ಸುರೇಶ ಕುಲಾಲ್ ಕೊಚೋಟ್ಟು ಹಾಗೂ ಸುಧಾಕರ್ ಕುಲಾಲ್ ಪೋರಿಂಜ ಇವರನ್ನು ಆಯ್ಕೆ ಮಾಡಿದ್ದು, ಜೊತೆ ಕಾರ್ಯದರ್ಶಿಯಾಗಿ ರಮೇಶ್ ಕುಲಾಲ್ ಮಿತ್ತಬೆಟ್ಟು ಇವರನ್ನು ಆಯ್ಕೆ ಮಾಡಲಾಯಿತು. 20 ಜನ ಸಂಚಾಲಕರು, ಗೌರವ ಸಲಹೆಗಾರರು ಆಗಿ ರಾಮ ಬಂಗೇರ ಕಾಯರಬೆಟ್ಟು ಹಾಗೂ ಸುರೇಶ ಕುಲಾಲ್ ಕಂಬಳದಡ್ಡ, ಕಾರ್ಯಕ್ರಮದ ಉದ್ದೇಶ ನಮ್ಮ ಸ್ವಜಾತಿ ಹಾಗೂ ಇತರ ಸಮುದಾಯದಿಂದ ಶೈಕ್ಷಣಿಕ ಹಾಗೂ ಆರೋಗ್ಯದ ಸಮಸ್ಯೆ ಇರುವವರನ್ನು ಗುರುತಿಸಿ ಅವರಿಗೆ ಈ ಕ್ರೀಡಾಕೂಟದಿಂದ ಸಹಕಾರ ನೀಡುವ ದೊಡ್ಡ ಉದ್ದೇಶವಿದೆ ಉಳಿದ ಮೊತ್ತವನ್ನು ಸಂಘದ ಅಭಿವೃದ್ಧಿಗೆ ಬಳಕೆ ಮಾಡುವುದು ಹಾಗೂ ಇತರ ವಿಚಾರಗಳು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.