ಶಿರ್ಲಾಲು: ಮಾ.10ರಂದು ನಡೆಯಲಿರುವ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಆಮಂತ್ರಣ ಪತ್ರವನ್ನು ಫೆ.26ರಂದು ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ರಮೇಶ್ ಬಿಡುಗಡೆಗೊಳಿಸಿದರು. ಮಾ.10ರಂದು ವರ್ಷಾವಧಿ ಜಾತ್ರೆ, ಮಾ.13 ರಂದು ಭೈರವ ಕಲ್ಲಿನ ಪುರುಷರಾಯ ಜಾತ್ರೆ, ಮಾ.14 ರಂದು ಕುಟೆಕ್ಕಿನಡೆ ದೊಂಪದ ಬಲಿ, ಮಾ.21 ರಂದು ಅಂಗಣ ಪಂಜುರ್ಲಿ ನೇಮೋತ್ಸವ ಜರುಗಲಿದೆ. ಅರ್ಚಕ ಸೂರ್ಯನಾರಾಯಣ ಭಟ್, ಸಂಜೀವ ಪೂಜಾರಿ ಕೊಡಂಗೆ, ಕುಶಾಲಪ್ಪ ಗೌಡ ಪೊಸಲಾಯಿ, ರಮೇಶ್ ಬಂಗೇರ ಅಭಿ ನಿವಾಸ, ರವಿಚಂದ್ರ ಬಂಗೇರ, ವಸಂತ ಪೂಜಾರಿ ಪೊಸಲಾಯಿ, ಕೃಷ್ಣಪ್ಪ ಪೂಜಾರಿ ಸುದೆಲಾಯಿ, ಶಿವಾನಂದ ಮಜಲುಪಲೆ ಉಪಸ್ಥಿತರಿದ್ದರು.