Thursday, April 24, 2025
HomeUncategorizedಶಿರೂರು ಗುಡ್ಡ ಕುಸಿತದ ವೇಳೆ ನದಿಯಲ್ಲಿ ತೇಲಿ ಹೋಗಿದ್ದ ಟ್ಯಾಂಕರ್‌ ಚಾಲಕನ ಶವ ಪತ್ತೆ |...

ಶಿರೂರು ಗುಡ್ಡ ಕುಸಿತದ ವೇಳೆ ನದಿಯಲ್ಲಿ ತೇಲಿ ಹೋಗಿದ್ದ ಟ್ಯಾಂಕರ್‌ ಚಾಲಕನ ಶವ ಪತ್ತೆ | ನಾಪತ್ತೆಯಾಗಿದ್ದ ಬಾಲಕಿಯ ಶವವೂ ಪತ್ತೆ

ಅಂಕೋಲಾ: ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದಾಗಿ ನಾಪತ್ತೆಯಾಗಿದ್ದವರ ಪೈಕಿ ಇಂದು ಮತ್ತೆ ಮೂರು ಶವಗಳು ಪತ್ತೆಯಾಗಿವೆ. ಭೂ ಕುಸಿತದ ವೇಳೆ ನದಿಗೆ ಎಸೆಯಲ್ಪಟ್ಟು ನೀರಿನಲ್ಲಿ ತೇಲಿ ಹೋಗಿದ್ದ ಟ್ಯಾಂಕರ್‌ ಚಾಲಕನ ಶವ ಕೂಡ ಇಂದು ಪತ್ತೆಯಾಗಿದೆ. ಎನ್‌ಡಿಆರ್‌ಎಫ್‌ನ ಸತತ ಕಾರ್ಯಾಚರಣೆಯ ಬಳಿಕ, ಗ್ಯಾಸ್‌ ಟ್ಯಾಂಕರ್‌ ಚಾಲಕ ಮುರುಗನ್‌ ಮೃತದೇಹ ಪತ್ತೆಯಾಗಿದೆ.
ಮತ್ತೊಬ್ಬ ವ್ಯಕ್ತಿಯ ಮೃತದೇಹ ಕೂಡ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಅಂಕೋಲಾ ತಾಲೂಕಿನ ಮಂಜಗುಣಿ ಬಳಿಯಲ್ಲಿ ಶವ ಸಿಕ್ಕಿದೆ. ಇಲ್ಲಿಯವರೆಗೆ ಒಟ್ಟು 7 ಶವಗಳು ಸಿಕ್ಕಿವೆ. ಸದ್ಯ ನದಿಯಲ್ಲಿ ಹುಡುಕಾಟದ ಕಾರ್ಯಾಚರಣೆ ಮುಂದುವರೆದಿದೆ.


ಬಾಲಕಿಯ ಶವ ಪತ್ತೆ:
ಗುಡ್ಡ ಕುಸಿತದ ವೇಳೆ ಒಂದೇ ಕುಟುಂಬದ ಐವರು ನಾಪತ್ತೆಯಾಗಿದ್ದರು. ಅವರಲ್ಲಿ ಮೂವರ ಮೃತದೇಹ ನಿನ್ನೆ ಸಿಕ್ಕಿತ್ತು. ಇನ್ನಿಬ್ಬರ ಶವ ಪತ್ತೆಯಾಗಿರಲಿಲ್ಲ. ಇದೀಗ ಕಾಣೆಯಾಗಿದ್ದ ಅವಂತಿಕಾಳ (6) ಮೃತದೇಹ ಪತ್ತೆಯಾಗಿದೆ. ಲಕ್ಷ್ಮಣ ನಾಯ್ಕ, ಪತ್ನಿ ಶಾಂತಿ ನಾಯ್ಕ, ಮಗ ರೋಶನ್ ನಾಯ್ಕ ಮೃತದೇಹ ಪತ್ತೆಯಾಗಿತ್ತು. ಇದೀಗ ಬಾಲಕಿ ಅವಂತಿಕಾ ಮೃತದೇಹ ಕೂಡ ಪತ್ತೆಯಾಗಿದೆ. ಕುಮಟಾ ತಾಲೂಕಿನ ಗಂಗೆಕೊಳ್ಳದ ಸಮುದ್ರ ತೀರದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಮೃತದೇಹವನ್ನು ಗೋಕರ್ಣದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.

RELATED ARTICLES
- Advertisment -
Google search engine

Most Popular