Tuesday, March 18, 2025
Homeಉತ್ತರ ಕನ್ನಡಶಿರೂರು ದುರಂತ | ಮನೆಯ ಆಧಾರಸ್ತಂಭವಾಗಿದ್ದ ಅರ್ಜುನ್‌ಗಾಗಿ ಕಾಯುತ್ತಿದೆ ಕುಟುಂಬ

ಶಿರೂರು ದುರಂತ | ಮನೆಯ ಆಧಾರಸ್ತಂಭವಾಗಿದ್ದ ಅರ್ಜುನ್‌ಗಾಗಿ ಕಾಯುತ್ತಿದೆ ಕುಟುಂಬ

ಸೇಲ್ಸ್‌ಮ್ಯಾನ್‌, ಪೇಂಟರ್‌, ಲಾರಿಡ್ರೈವರ್‌… ಕುಟುಂಬಕ್ಕಾಗಿ ಏನೆಲ್ಲಾ ಮಾಡಿದ ಮನೆಯೊಡೆಯನ ಪತ್ತೆ ಇಲ್ಲ!
ಶಿರೂರು: ಭಾರೀ ಮಳೆಯಿಂದಾಗಿ ಶಿರೂರು ಬಳಿ ಸಂಭವಿಸಿದ ಭಾರೀ ಭೂ ಕುಸಿತ ದುರಂತದಲ್ಲಿ ನಾಪತ್ತೆಯಾಗಿರುವ ಅರ್ಜುನ್ ಹುಡುಕಾಟ ಇನ್ನೂ ಮುಂದುವರೆದಿದೆ. ಮನೆಯ ಆಧಾರಸ್ತಂಭವಾಗಿದ್ದ ಅರ್ಜುನ್​ ಶಾಲಾ ಶಿಕ್ಷಣ ಮುಗಿಸಿದ ಬಳಿಕ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಆರಂಭದಲ್ಲಿ ಬಟ್ಟೆ ಅಂಗಡಿಯಲ್ಲಿ ಸೇಲ್ಸ್​ಮ್ಯಾನ್​ ಆಗಿದ್ದ ಅರ್ಜುನ್‌, ನಂತರ ಪೇಟಿಂಗ್​ ಕೆಲಸಕ್ಕೂ ಹೋಗುತ್ತಿದ್ದರು.
ತನ್ನ ತಂದೆ ಬಾವಿತೋಡುವಾಗ ಬಿದ್ದು, ಗಂಭೀರ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಯ ಹೊಣೆ ಅರ್ಜುನ್‌ ತೆಗೆದುಕೊಂಡಿರುತ್ತಾರೆ. 22ನೇ ವಯಸ್ಸಿನಲ್ಲಿ ಅರ್ಜುನ್​ ಕುಟುಂಬ ನಿರ್ವಹಣೆ ಮಾಡಲು ಸಾಕಷ್ಟು ಕಠಿಣ ಕೆಲಸಗಳನ್ನು ಮಾಡುತ್ತಿದ್ದರು. ಬಳಿಕ ಅವರಿಗೆ ವಾಹನಗಳ ಮೇಲೆ ವಿಶೇಷವಾದ ಒಲವು ಮೂಡುತ್ತದೆ. ಹೀಗಾಗಿ ಹೆವಿ ವೆಹಿಕಲ್​ ಲೈಸನ್ಸ್​ ಮಾಡಿಸಿಕೊಳ್ಳುತ್ತಾರೆ. ಲೈಸೆನ್ಸ್‌ ಸಿಗುತ್ತಲೇ ಲಾರಿ ಚಾಲಕರಾಗಿ ಕೆಲಸಕ್ಕೆ ಸೇರುತ್ತಾರೆ. ಟ್ರಕ್​ ಡ್ರೈವರಾಗಿ ಕೆಲಸಕ್ಕೆ ಸೇರಿದಾಗ ಅರ್ಜುನ್​ ಕಾಶ್ಮೀರದಿಂದ ದಕ್ಷಿಣದವರೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದರು.
2 ವರ್ಷಗಳ ಹಿಂದೆ ಅರ್ಜುನ್​ ಕೇರಳದಿಂದ ವಿವಿಧ ಸ್ಥಳಗಳಿಗೆ ಟಿಂಬರ್​ ಸಾಗಿಸುವ ಕೆಲಸಕ್ಕೆ ಚಾಲಕನಾಗಿ ಸೇರುತ್ತಾರೆ. ಅದೇ ಕೆಲಸದಲ್ಲಿದ್ದ ಅರುಣ್‌, ಜುಲೈ 16ರಂದು ಸಾಗರ್​ ಕೋಯಾ ಟಿಂಬರ್ಸ್​ ಮಾಲಿಕತ್ವದ ಕೆಎ15 ಎ7427 ನೋಂದಣಿಯ ಭಾರತ್​ ಬೆಂಜ್​ ಲಾರಿಯನ್ನು ಚಲಾಯಿಸಿಕೊಂಡು ಶಿರೂರು ಕಡೆಗೆ ಬಂದಿದ್ದಾರೆ. ಆದರೆ ಈ ವೇಳೆ ಅಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದು ಅರುಣ್‌ ನಾಪತ್ತೆಯಾಗಿದ್ದಾರೆ.
ಈಗ 30 ವರ್ಷದ ನಾಪತ್ತೆಯಾದ ಅರ್ಜುನ್​ಗಾಗಿ ಹುಡುಕಾಟ ನಡೆಯುತ್ತಿದೆ. ತಾಯಿ ಮತ್ತು ಹೆಂಡತಿಯನ್ನು ಹೆಚ್ಚು ಪ್ರೀತಿಸುವ ಅರ್ಜುನ್​ ದಿನಕ್ಕೆ ಐದಾರು ಬಾರಿ ಕರೆ ಮಾಡುತ್ತಿದ್ದರಂತೆ. ಆದರೀಗ ಅರ್ಜುನ್​ ನಾಪತ್ತೆಯಾದ ಬಳಿಕದಿಂದ ಕುಟುಂಬ ಕಣ್ಣೀರಿನಲ್ಲಿ ಕುಳಿತಿದೆ.
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಅರ್ಜುನ್​ಗಾಗಿ ನಿರಂತರ ಹುಡುಕಾಟ ನಡೆಯುತ್ತಿದೆ. ಇಂದಿಗೆ 10 ದಿನ ಕಳೆದರೂ ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅರ್ಜುನ್ ಚಲಾಯಿಸುತ್ತಿದ್ದ ಲಾರಿ​ ದಡದಿಂದ 40 ಮೀಟರ್​ ದೂರದಲ್ಲಿರುವ ನದಿಯಲ್ಲಿ ಇರುವುದು ಪತ್ತೆಯಾಗಿದೆ. ಮಾಹಿತಿ ಪ್ರಕಾರ 15 ಮೀಟರ್​ ಅಳದಲ್ಲಿ ಲಾರಿ ಇದೆ ಎಂದು ಅಂದಾಜಿಸಲಾಗಿದೆ. ಇಂದು ಲಾರಿಯನ್ನು ಮೇಲೆಕೆತ್ತುವಲ್ಲಿ ಪ್ರಯತ್ನ ನಡೆಯಲಿದೆ. ಅದಕ್ಕಾಗಿ ದೆಹಲಿಯಿಂದ ತಜ್ಞರ ತಂಡ ಆಗಮಿಸುತ್ತಿದೆ.

RELATED ARTICLES
- Advertisment -
Google search engine

Most Popular