ಪುತ್ತೂರು: ಇಲ್ಲಿನ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಶಿವಲಿಂಗ ಮಾದರಿಯೊಂದು ಪತ್ತೆಯಾಗಿದೆ. ಇದು ಕಪ್ಪು ಮತ್ತು ಚಿನ್ನ ಲೇಪಿತ ಬಣ್ಣದಲ್ಲಿದೆ. ವಿಷಯ ತಿಳಿದು ಪುತ್ತೂರು ವಿಶ್ವ ಹಿಂದೂ ಪರಿಷತ್ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ, ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ ಸಹಿತ ಹಲವರು ಸ್ಥಳಕ್ಕೆ ಆಗಮಿಸಿದರು.
ಇದು ಶಿವಲಿಂಗವೋ ಅಥವಾ ಆ ರೀತಿಯ ಬೇರೆ ಯಾವುದೋ ವಸ್ತುವೋ ಎಂದು ತಿಳಿದುಬಂದಿಲ್ಲ. ಬಸ್ಸು ನಿಲ್ದಾಣದ ಸೀಟಿನಲ್ಲಿ ಇದು ಪತ್ತೆಯಾಗಿದೆ. ಇದನ್ನು ಯಾರು ತಂದಿಟ್ಟರು, ಇದನ್ನು ತಂದಿಟ್ಟಿರುವ ಉದ್ದೇಶವೇನೆಂದು ತಿಳಿದುಬಂದಿಲ್ಲ. ಪೊಲೀಸರು ಈ ಶಿವಲಿಂಗವನ್ನು ಠಾಣೆಗೆ ಕೊಂಡೊಯ್ದಿದ್ದಾರೆ.