Monday, February 10, 2025
Homeಧಾರ್ಮಿಕದಾವಣಗೆರೆ: ಶಿವನಾರದಮುನಿ ಸ್ವಾಮಿ ಕಡೇ ಶ್ರಾವಣ ಶನಿವಾರದ ವಿಶೇಷ ಪೂಜೆ

ದಾವಣಗೆರೆ: ಶಿವನಾರದಮುನಿ ಸ್ವಾಮಿ ಕಡೇ ಶ್ರಾವಣ ಶನಿವಾರದ ವಿಶೇಷ ಪೂಜೆ

ದಾವಣಗೆರೆ: ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲ್ಲೂಕು, ಚಿಗಟೇರಿ ಗ್ರಾಮದ ಶಿವನಾರದಮುನಿ ಸ್ವಾಮಿಯ ಕಡೇ ಶ್ರಾವಣ ಶನಿವಾರದ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ದಿನಾಂಕ 31-08-2024ರ ಶನಿವಾರದಂದು ಏರ್ಪಡಿಸಲಾಗಿದೆ.
ದಿನಾಂಕ 31-08-2024ರ ಶನಿವಾರದಂದು ಬೆಳಿಗ್ಗೆ 5 ರಿಂದ 6 ರವರೆಗೆ ರುದ್ರಾಭಿಷೇಕ, ನಂತರ ಹೊಸ ಮಡಿ ವಿಶೇಷಹೂವಿನ ಅಲಂಕಾರದೊಂದಿಗೆ ವಿಶೇಷ ಪೂಜೆಯು ಬೆಳಿಗ್ಗೆ 9 ರಿಂದ 10 ರವರೆಗೆ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಪ್ರಧಾನ ಅರ್ಚಕರಿಂದ ಮಹಾಮಂಗಳಾರತಿಯೊಂದಿಗೆ ವಿಶೇಷ ಪೂಜೆ ನೆರವೇರುವುದು. ದೇವಸ್ಥಾನಕ್ಕೆ ಬರುವ
ಭಕ್ತಾಧಿಗಳಿಗೆ ಸುಮಾರು 25 ಸಾವಿರ ಜನರಿಗೆ ಪ್ರಸಾದದ ವ್ಯವಸ್ಥೆಯನ್ನು ದೇವಸ್ಥಾನ ಸಮಿತಿಯವತಿಯಿಂದ
ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಸರ್ವ ಭಕ್ತಾಧಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಿ ದರ್ಶನಾಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಬೇಕೆಂದು ಶ್ರೀ ಶಿವನಾರದಮುನಿ ದೇವಸ್ಥಾನ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಅಣಬೇರು ರಾಜಣ್ಣನವರು, ಟ್ರಸ್ಟ್ ಪದಾಧಿಕಾರಿಗಳು ಮತ್ತು ಸದಸ್ಯರು ಮತ್ತು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular