Sunday, July 21, 2024
Homeಧಾರ್ಮಿಕಶಿವಪುರ ಶ್ರೀಶಂಕರಲಿಂಗೇಶ್ವರ ದೇವಸ್ಥಾನ: ಪುನಃಪ್ರತಿಷ್ಠೆ ಅಷ್ಟಬಂಧ, ಬ್ರಹ್ಮಕಲಶೋತ್ಸವ ಸಂಭ್ರಮ

ಶಿವಪುರ ಶ್ರೀಶಂಕರಲಿಂಗೇಶ್ವರ ದೇವಸ್ಥಾನ: ಪುನಃಪ್ರತಿಷ್ಠೆ ಅಷ್ಟಬಂಧ, ಬ್ರಹ್ಮಕಲಶೋತ್ಸವ ಸಂಭ್ರಮ

ಹೆಬ್ರಿ : ಶಿವಪುರ ಶ್ರೀಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಎ.12ರಿಂದ 18ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ವಾಸ್ತುಶಾಸ್ತ್ರಜ್ಞರ ಅಭಿಮತದಂತೆ ಸುಮಾರು 1,300 ವರ್ಷಗಳಷ್ಟು ಪ್ರಾಚೀನ ಹಾಗೂ ಅವಿಭಜಿತ ಕಾರ್ಕಳ ತಾಲೂಕಿನಲ್ಲಿ 2ನೇ ಪ್ರಾಚೀನ ಶಿವಾಲಯ ಎನ್ನಲಾಗಿದೆ. ಸುಮಾರು 614 ವರ್ಷಗಳ ಹಿಂದೆ ವಿಜಯನಗರದ ಅರಸ ವೀರಪ್ರತಾಪ ದೇವರಾಯನ ಕಾಲದಲ್ಲಿ ಬಾರಕೂರಿನ ಆಡಳಿತಗಾರ ಶಂಕರದೇವ ಒಡೆಯರ ಕಾಲದಲ್ಲಿ ಶಿವಪುರ ಮಾಗಣೆಯ ಶಾನುಭೋಗ ಅಲ್ಲಪ್ಪ ಅವರ ನೇತೃತ್ವದಲ್ಲಿ ಈ ದೇವಸ್ಥಾನದ ಜೀರ್ಣೋದ್ದಾರ ಆಗಿರುತ್ತದೆ ಹಾಗೂ ಪ್ರತಿನಿತ್ಯವೂ ನಡೆಯಬೇಕಾದ ಬ್ರಾಹ್ಮಣ ಭೋಜನ, ನಂದಾದೀಪ ಹಾಗೂ ಉತ್ಸವಾದಿಗಳಿಗೆ ಕೃಷಿಭೂಮಿಯನ್ನು ದತ್ತಿಯಾಗಿ ನೀಡಿರುವ ಉಲ್ಲೇಖವೂ ಇದೆ. ಅಲ್ಲದೆ ಈ ದೇವಾಲಯವು ನಾಲ್ಕು ಮಾಗಣೆಗಳ ಸಂಬಂಧವನ್ನು ಹೊಂದಿದ್ದು ನಾಲ್ಕು ಬೀಡಿನ ಮನೆತನದವರು (ಕುಂದಾರು ಬೀಡು, ಬಣ್ಣಂಪಳ್ಳಿ ಬೀಡು, ಹೆರ್ಡೆಬೀಡು, ಪಡುಕುಡೂರು ಬೀಡು) ದೇವಾಲಯಕ್ಕೆ ನಡೆದುಕೊಳ್ಳುತ್ತಿದ್ದರೆಂದೂ ದಾಖಲೆಗಳಿಂದ ತಿಳಿದು ಬರುತ್ತದೆ. ಇದೀಗ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮತ್ತು ಜೀರ್ಣೋದ್ದಾರ ಸಮಿತಿಯ ನೇತೃತ್ವದಲ್ಲಿ ಊರ ಪರ ಊರ ಭಕ್ತರ ಸಹಕಾರದೊಂದಿಗೆ ಸುಮಾರು 2 ಕೋ.ರೂ. ವೆಚ್ಚದಲ್ಲಿ ನೂತನ ಶಿಲಾಮಯ ಗರ್ಭಗುಡಿ ಹಾಗೂ ತೀರ್ಥ ಮಂಟಪ ನಿರ್ಮಾಣಗೊಂಡಿದ್ದು ಸುಮಾರು 12 ಕೋ.ರೂ. ವೆಚ್ಚದಲ್ಲಿ ದೇವಸ್ಥಾನದ ಸಮಗ್ರ ಜೀರ್ಣೋದ್ದಾರದ ಕಾಮಗಾರಿ ಆಗಬೇಕಾಗಿದ್ದು ಸರ್ವರ ಸಹಕಾರ ಅಗತ್ಯವಿದೆ. ಬ್ರಹ್ಮಕಲಶೋತ್ಸವ ಸಂಭ್ರಮ: ಬ್ರಹ್ಮ ಕಲಶೋತ್ಸವದ ಅಂಗವಾಗಿ ಎ.12ರಿಂದ 18ರ ತನಕ ದಿನ ಪ್ರತಿ ಸಂಜೆ 4.30ರಿಂದ ಭಾಗವತ ಪ್ರವಚನ, ದಿನನಿತ್ಯ ಧಾರ್ಮಿಕ ಹಾಗೂ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.

RELATED ARTICLES
- Advertisment -
Google search engine

Most Popular