ಹೆಬ್ರಿ: ಶಿವಪುರ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಗರ್ಭಗೃಹ ಸಮರ್ಪಣೆ, ಪುನರ್‌ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ಶಿವಪುರ ದೇವಸ್ಥಾನದವರೆಗೆ ಪಂಚಾಯಿತಿಯಿಂದ ನಡೆಯಿತು.
ಸುಮಾರು 4 ಸಾವಿರ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ತಾಲೂಕಿನ ನಾನಾ ಕಡೆಗಳಿಂದ 50ಕ್ಕೂ ಅಧಿಕ ಭಜನಾ ತಂಡಗಳ 600 ಸದಸ್ಯರು ಕುಣಿತ ಭಜನೆಯಲ್ಲಿ ಭಾಗವಹಿಸಿದ್ದರು. ಟ್ಯಾಬ್ಲೊಗಳು, ಚಂಡೆ, ಹುಲಿ ಕುಣಿತ, ಸೇರಿದಂತೆ ನಾನಾ ಕಲಾ ತಂಡಗಳು ಮೆರವಣಿಗೆಯಲ್ಲಿದ್ದವು. ಮೆರವಣಿಗೆಗೆ ಅರ್ಚಕ ಗೋಪಾಲಕೃಷ್ಣ ಭಟ್ ಭಂಡಾರಬೆಟ್ಟು ಮತ್ತು ಮಾರ್ಮಕ್ಕೆ ಮಠದ ರಾಮಕೃಷ್ಣ ಭಟ್ ಚಾಲನೆ ನೀಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಅಡಿಗ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಾಸುದೇವ ಭಟ್, ಶ್ರೀನಿವಾಸ ಹೆಬ್ಬಾರ್, ರೈತಸೇವಾ ಲಕ್ಷ್ಮೀನಾರಾಯಣ ನಾಯಕ್ ಉಪಸ್ಥಿತರಿದ್ದರು.