ಉತ್ತರಪ್ರದೇಶ: ಇಲ್ಲಿನ ಸಹರಾನ್‌ಪುರದಲ್ಲಿ ಮದುವೆಯ ರಾತ್ರಿ ವಧು ಬಹಿರಂಗವಾಗಿ ಬಿಯರ್ ಮತ್ತು ಗಾಂಜಾಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಇಡೀ ವಿಷಯವನ್ನು ಕುಟುಂಬದವರಿಗೆ ಹೇಳಿದಾಗ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ವರನು ಮೊದಲು ಇದು ತಮಾಷೆ ಎಂದುಕೊಂಡಿದ್ದ, ಆದರೆ ಆಕೆ ಗಂಭೀರವಾಗಿಯೇ ಇದನ್ನು ಕೇಳಿದ್ದಳು. ಇವರು ಇಷ್ಟಪಟ್ಟು ಮದುವೆಯಾಗಿದ್ದರು, ಇಂದಿನಿಂದ ಹೊಸ ಜೀವನ ಆರಂಭಿಸುವ ಉತ್ಸಾಹದಲ್ಲಿದ್ದರು. ಆದರೆ ಮೊದಲ ರಾತ್ರಿಯಲ್ಲಿ ವಧು ಗಾಂಜಾ ಹಾಗೂ ಬಿಯರ್ ಕೊಡಿ ಎಂದು ಕೇಳಿ ನಡೆದುಕೊಂಡಿರುವ ರೀತಿ ನೋಡಿ ವರ ಬೆಚ್ಚಿಬಿದ್ದಿದ್ದಾನೆ. ಕೂಡಲೇ ಮದುವೆಯನ್ನು ರದ್ದುಪಡಿಸುವ ನಿರ್ಧಾರಕ್ಕೆ ಬಂದಿದ್ದಾನೆ.
ಈ ವಿಚಾರವನ್ನು ಮನೆಯವರಿಗೆ ತಿಳಿಸಿದ್ದು, ಕೋಲಾಹಲ ಸೃಷ್ಟಿಯಾಗಿತ್ತು. ಬಳಿಕ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಅವರು ದಂಪತಿಯನ್ನು ಒಟ್ಟಿಗೆ ಇರುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ವರನ ನಿರ್ಧಾರ ದೃಢವಾಗಿತ್ತು, ಈ ವಿಲಕ್ಷಣ ಘಟನೆಯು ಸಾಮಾಜಿಕ ಮಾಧ್ಯಮದಾದ್ಯಂತ ಚರ್ಚೆಯ ಅಲೆಯನ್ನು ಹುಟ್ಟುಹಾಕಿದೆ, ವಧುವಿನ ಅಸಾಮಾನ್ಯ ಬೇಡಿಕೆ ಕೇಳಿ ಜನರಿಗೆ ಆಶ್ಚರ್ಯವಾಗಿದೆ.
ಆಘಾತಕಾರಿ ಘಟನೆ: ಮೊದಲ ರಾತ್ರಿಯಲ್ಲೇ ಬಿಯರ್, ಗಾಂಜಾ ಕೇಳಿದ ವಧು: ಮದುವೆ ರದ್ದುಪಡಿಸಿದ ವರ
RELATED ARTICLES