ಕೇರಳ: ಪಾಳುಬಿದ್ದ ಮನೆಯೊಂದರಲ್ಲಿ ಇದ್ದ ಫ್ರಿಡ್ಜ್‌ನಲ್ಲಿ ಮಾನವ ತಲೆಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿರುವ ಘಟನೆಯೊಂದು ಕೇರಳದ ಕೊಚ್ಚಿಯ ಚೊಟ್ಟನಿಕ್ಕರದ ಇರುವಲ್ಲಿ ಬಳಿಯ ಪಾಳು ಬಿದ್ದ ಮನೆಯಲ್ಲಿ ಬೆಳಕಿಗೆ ಬಂದಿದೆ.
ಈ ಪಾಳುಬಿದ್ದ ಮನೆಯಲ್ಲಿದ್ದ ಫ್ರಿಡ್ಜ್‌ನಲ್ಲಿ ಮಾನವನ ತಲೆಬುರುಡೆ ಹಾಗೂ ಮಾನವ ದೇಹದ ಮೂಳೆಗಳು ಪತ್ತೆಯಾಗಿದ್ದು, ಈ ಅಸ್ಥಿಪಂಜರದ ಅವಶೇಷಗಳು ಹಲವಾರು ವರ್ಷಗಳಷ್ಟು ಹಳೆಯದಾಗಿರುವಂತೆ ಕಂಡು ಬರುತ್ತಿದ್ದು ವಿಸ್ತಾರವಾದ ತನಿಖೆಯಿಂದಷ್ಟೇ ಈ ತಲೆಬುರುಡೆ ಯಾರಿಗೆ ಸೇರಿದ್ದು ಇಲ್ಲಿಗೆ ಹೇಗೆ ಬಂತು ಎಂಬುದು ತಿಳಿದು ಬರಲಿದೆ.
ಛೋಟನಿಕ್ಕರದ ಪೊಲೀಸರು ತಪಾಸಣೆ ನಡೆಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿನ ಸ್ಥಳೀಯ ಪಂಚಾಯತ್ ಆಡಳಿತವೂ ಈ ಪಾಳು ಬಿದ್ದ ಮನೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ಆಗಮಿಸಿ ಶೋಧ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ತಪಾಸಣೆ ವೇಳೆ ಪೊಲೀಸರು ಅಲ್ಲಿದ್ದ ಫ್ರಿಡ್‌ನ ಬಾಗಿಲು ತೆರೆದಿದ್ದು, ಈ ವೇಳೆ ಒಳಗಿರುವುದನ್ನು ನೋಡಿ ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಈ ಫ್ರಿಡ್‌ನ್ನು ಮನೆಯಲ್ಲಿ ಜನರು ವಾಸವಿದ್ದ ವೇಳೆ ಬಳಸುತ್ತಿದ್ದಿರಬಹುದು ಎನ್ನಲಾಗುತ್ತಿದೆ.