Saturday, April 26, 2025
HomeUncategorizedಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ರೌಡಿಶೀಟರ್‌ನಿಂದ ಮಚ್ಚಿನಿಂದ ಹಲ್ಲೆ | ಶೂಟೌಟ್‌, ಕಾಲಿಗೆ ಗುಂಡೇಟು

ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ರೌಡಿಶೀಟರ್‌ನಿಂದ ಮಚ್ಚಿನಿಂದ ಹಲ್ಲೆ | ಶೂಟೌಟ್‌, ಕಾಲಿಗೆ ಗುಂಡೇಟು

ಕೋಲಾರ: ಬಂಧನಕ್ಕೆ ಬಂದಿದ್ದ ಪೊಲೀಸ್‌ ಪೇದೆಯ ಮೇಲೆ ರೌಡಿ ಶೀಟರ್‌ ಒಬ್ಬ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ವೇಳೆ ರೌಡಿ ಶೀಟರ್‌ ಕಾಲಿಗೆ ಪೊಲೀಸರು ಶೂಟೌಟ್‌ ಮಾಡಿದ್ದಾರೆ. ಅಂಡರ್‌ಸನ್‌ ಪೇಟೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಾಂಟೆಡ್‌ ಆಗಿದ್ದ ಸ್ಟಾಲಿನ್‌ ಎಂಬಾತನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ ಮಚ್ಚಿನಿಂದ ಪೊಲೀಸ್‌ ಪೇದೆ ಸುನಿಲ್‌ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಆತನಿಗೆ ಎಚ್ಚರಿಕೆ ಕೊಟ್ಟರೂ ಕೇಳದ ಕಾರಣ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗಾಯಗೊಂಡ ರೌಡಿಶೀಟರ್‌ನನ್ನು ಕೆಜಿಎಫ್‌ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೆಜಿಎಫ್‌ ಡಿವೈಎಸ್‌ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲಿಸಿದ್ದಾರೆ.

RELATED ARTICLES
- Advertisment -
Google search engine

Most Popular