Tuesday, December 3, 2024
HomeUncategorizedಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದ ಮಾವ-ಸೋದರಳಿಯ ಶೂಟೌಟ್‌: ಬೆಚ್ಚಿ ಬೀಳಿಸಿದ ಡಬಲ್‌ ಮರ್ಡರ್‌..!

ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದ ಮಾವ-ಸೋದರಳಿಯ ಶೂಟೌಟ್‌: ಬೆಚ್ಚಿ ಬೀಳಿಸಿದ ಡಬಲ್‌ ಮರ್ಡರ್‌..!


ನವದೆಹಲಿ: ದೀಪಾವಳಿ ಹಬ್ಬದಂದು ದೆಹಲಿಯಲ್ಲಿ ನಡೆದ ಡಬಲ್‌ ಮರ್ಡರ್‌ ಘಟನೆ ದೆಹಲಿ ಜನರನ್ನು ಬೆಚ್ಚಿ ಬೀಳಿಸಿದೆ. ಇಬ್ಬರು ಶಸ್ತ್ರಧಾರಿಗಳು ಗುಂಡು ಹಾರಿಸಿ ಜೋಡಿ ಕೊಲೆ ಮಾಡಿದ್ದಾರೆ. ದೆಹಲಿಯ ಈಶಾನ್ಯ ಭಾಗದ ಶಾಹಾದಾರದಲ್ಲಿ ಈ ಘಟನೆ ನಡೆದಿದ್ದು, ಆಕಾಶ್‌ ಹಾಗೂ ಆತನ ಸೋದರಳಿಯ ರಿಶಭ್‌ ಶರ್ಮಾ ಮೃತಪಟ್ಟಿದ್ದಾರೆ.
ಮೃತ ಆಕಾಶ್‌ ಪುತ್ರ ಕಿಶಾನ್‌ ಗಾಯ ಗೊಂಡಿದ್ದಾನೆ. ಮನೆಯ ಹೊರಗಡೆ ದೀಪಾವಳಿ ಆಚರಿಸುತ್ತಿದ್ದ ಸಮಯದಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ.

ಗುರುವಾರ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಶಸ್ತ್ರಾಸ್ತ್ರ ಸಹಿತ ಬಂದೂಕುಧಾರಿಗಳು ಸ್ಕೂಟರ್‌ನಲ್ಲಿ ಬಂದು, ಸೋದರಳಿಯನ ಜೊತೆ ಪಟಾಕಿ ಸಿಡಿಸುತ್ತಿದ್ದ ಆಕಾಶ್‌ ಪಾದ ಮುಟ್ಟಿ ನಮಸ್ಕಾರ ಮಾಡುತ್ತಾರೆ. ನಂತರ ತಮ್ಮ ಜತೆಗಿದ್ದ ಬಂದೂಕಿನಿಂದ ಆತನನ್ನು ಶೂಟ್‌ ಮಾಡುತ್ತಾರೆ. ಹತ್ಯೆಯನ್ನು ತಡೆಯಲು ಬಂದ ರಿಶಬ್‌ನನ್ನೂ ಕೊಲೆ ಮಾಡಲಾಗಿದೆ. ಮನೆ ಹೊರಗಡೆ ಆಟವಾಡುತ್ತಿದ್ದ ಮೃತ ಆಕಾಶ್‌ನ ಹತ್ತು ವರ್ಷದ ಮಗ ಕಿಶನ್‌ಗೂ ಗಾಯಗಳಾಗಿವೆ. ಹತ್ಯೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಭೀಕರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.
ಗುಂಡಿನ ದಾಳಿ ಬಳಿಕ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಾರ್ಗ ಮಧ್ಯೆಯೇ ಆಕಾಶ್ ಹಾಗೂ ರಿಶಬ್ ಮೃತಪಟ್ಟಿದ್ದಾರೆ. ಕಿಶನ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಳಿಕ ಪೊಲೀಸರಿಗೆ ಪಿಸಿಆ‌ರ್ ಕರೆ ಬಂದಿದೆ ಎಂದು ಶಹದಾರ ಉಪ ಪೊಲೀಸ್‌ ಆಯುಕ್ತ (ಡಿಸಿಪಿ) ಪ್ರಶಾಂತ್ ಗೌತಮ್ ಖಚಿತಪಡಿಸಿದ್ದಾರೆ. ತಕ್ಷಣವೇ ಪೊಲೀಸರನ್ನು ಸ್ಥಳಕ್ಕೆ ಕಳುಹಿಸಲಾಯಿತು. ಪ್ರಾಥಮಿಕ ತನಿಖೆಯಲ್ಲಿ ಸಂತ್ರಸ್ತರ ಮೇಲೆ ಐದು ಸುತ್ತು ಗುಂಡು ಹಾರಿಸಲಾಗಿದೆ ಎಂದು ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ. ಕೊಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular