Wednesday, April 23, 2025
Homeಉಡುಪಿಮೋಗೆರ್ ಬಾಂಧವರೆಗೂ ಶ್ರದ್ಧಾ: ಬ್ರಹ್ಮರಗುಂಡದ ಶಿಲಾನ್ಯಾಸ ಕಾರ್ಯಕ್ರಮ

ಮೋಗೆರ್ ಬಾಂಧವರೆಗೂ ಶ್ರದ್ಧಾ: ಬ್ರಹ್ಮರಗುಂಡದ ಶಿಲಾನ್ಯಾಸ ಕಾರ್ಯಕ್ರಮ

ಮೊಗೇರ ಬಾಂಧವರಿಗೆ ವಂದನೆಗಳನ್ನು ತಿಳಿಸುತ್ತಾ, ಕೆಂಪು ಕೇಪುಲಾಜೆ ಜಯೊಲ್ಲ ನಾಗಬ್ರಹ್ಮರ ಮೂಲಸ್ಥಾನ ನಿಡ್ಪಳ್ಳಿಯ ಬ್ರಹ್ಮರಗುಂಡದ ಶಿಲಾನ್ಯಾಸ ಕಾರ್ಯಕ್ರಮದ ದಿನ ಹತ್ತಿರ ಬಂದಿದೆ. ನಮಗೆಲ್ಲಾ ತಿಳಿದಿರುವಂತೆ ಮೇ 1 ನೇ ತಾರೀಕು ತುಳುನಾಡಿನ ಪಂಚಾಂಗದ ಒಳ್ಳೆಯ ದಿನ ಪಗ್ಗು 18 ರ ಗುರುವಾರ ದಂದು ಬ್ರಹ್ಮರಗುಂಡದ ಶಿಲಾನ್ಯಾಸ ನಡೆಯಲಿದೆ.

ಅದೇ ದಿನ ವಿಶೇಷವಾಗಿ ನಮ್ಮ ಪಾಲಿಗೆ ಅವಕಾಶವೊಂದು ಒದಗಿ ಬಂದಿದೆ. ಮೂಲ ನಾಗಬ್ರಹ್ಮರು ನಮ್ಮ ಕುಲದೈವ ಗಳಿಗೆ ದಾರಿ ತೋರಿದವರು, ಅದೇ ರೀತಿ ನಮ್ಮ‌ಕುಲದೇವರು. ತಿಳಿದೋ, ತಿಳಿಯದೆಯೋ ನಮ್ಮ ಕುಲದೇವರನ್ನು ನಾವು ವಿಶೇಷ ರೀತಿಯಲ್ಲಿ ಆರಾಧನೆ ಮಾಡುವಲ್ಲಿ, ಮರೆತಿದ್ದೇವೆ. ನಮ್ಮ ಜೀವನದ ಪ್ರತೀ ಒಳ್ಳೆಯ ಕೆಲಸ ಕಾರ್ಯಗಳೂ ಕೂಡಾ ಬ್ರಹ್ಮರ ಆರಾಧನೆಯೊಂದಿಗೆ, ಬ್ರಹ್ಮರಗುಂಡದ ವಿಶೇಷ ಜಾಗಕ್ಕೆ ವರ್ಷಕ್ಕೆ ಒಂದು ಬಾರಿಯಾದರೂ ಹೋಗಿ ಪ್ರಾರ್ಥನೆ ಮಾಡುವಂತಹ ಅವಕಾಶ ನಮ್ಮದಾಗಬೇಕು.

ಅದಕ್ಕಾಗಿ ಮೂಲ ಬ್ರಹ್ಮರ ಗುಂಡ ಪುನರ್ನಿರ್ಮಾಣವಾಗಬೇಕು, ಮೊಗೇರ ರಾದ ನಮ್ಮ ಪಾಲಿಗೆ ಹಿರಿಯರು ಹೇಳುತ್ತಿದ್ದ ಹಾಗೆ ಜೀವಮಾನದಲ್ಲಿ ಒಂದು ಅವಕಾಶ ಬಂದಿದೆ. ನಮ್ಮೆಲ್ಲರ ಒಗ್ಗಟ್ಟಿನ ಮುತುವರ್ಜಿಯ ತನು ಮನ ಧನ ಸಹಕಾರ, ಶ್ರಮಸೇವೆಯಿಂದ ಆ ನೆಲದಲ್ಲಿ ಭವ್ಯ – ದಿವ್ಯ ಬ್ರಹ್ಮರ ಆಲಯ ತಲೆಯೆತ್ತಿ ನಿಲ್ಲಲು ಸಾಧ್ಯವಿದೆ. ಬನ್ನಿ , ಕೈಯಾರೆ ನಾವೆಲ್ಲರೂ ಸಹಕಾರ ನೀಡುತ್ತಾ, ಒಂದೇ ಕುಲ ಬಾಂಧವರೆಂಬ ಹೆಗ್ಗಳಿಕೆಯನ್ನು ಉಳಿಸೋಣ. ವಿಶೇಷವಾಗಿ ಮುದ್ಧ ಕಳಲರು ಮತ್ತು ತನ್ನಿಮಾನಿಗಳು ಅಂದಿನ ಕಾಲದಲ್ಲಿ ತಮ್ಮ ಹುಟ್ಟಿನ ಸಂಬಂಧ ತಂದೆ ತಾಯಿ ಹೇಳಿದ ಪುಂಡಿ ಪಣವು ಹರಕೆಯನ್ನು ತೀರಿಸಲು ಪಡುಮಲೆ ನೆಲಕ್ಕೆ ಬಂದಿದ್ದರು. ಈ ದ್ಯೋತಕವಾಗಿ ಮೇ 1 ರಂದು ‘ನಿಧಿಕುಂಭ’ ವನ್ನು ಸ್ಥಾಪಿಸಲಾಗುವುದು, ಪ್ರತೀ ಮೊಗೇರ ಬಾಂಧವರೂ ಒಂದು ಮುಷ್ಟಿ ನಾಣ್ಯವನ್ನು ಸಮರ್ಪಿಸಿ , ಕುಂಭ ದಿಂದ ಧನವು ಚೆಲ್ಲಿದರೆ ತನ್ಮೂಲಕ ಲಕ್ಷ್ಮೀ ಕಟಾಕ್ಷ ನಿಧಿ ಸಂಗ್ರಹವು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಉಳಿಸೋಣ. ಮುಂದಿನ ಕೆಲಸ ಕಾರ್ಯಗಳಲ್ಲಿ ತನು ಮನ ಧನ ದ ಸಹಕಾರ ಹೆಚ್ಚಾಗಲಿ ಎಂದು ಆಶಿಸೋಣ. ಪುಂಡಿ ಪಣವು – ಸಮರ್ಪಣೆ ‘ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸರ್ವ ಬಂಧುಗಳ ಸಹಕಾರ ಕೋರುವ. ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ -ಆಲಂಕಾರು
(ಆರು ಜಿಲ್ಲೆಗಳ ಸಂಯುಕ್ತ ವೇದಿಕೆ)

RELATED ARTICLES
- Advertisment -
Google search engine

Most Popular