ಬಂಟ್ವಾಳ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಿದ್ದತೆಗೆ ಇಂದು ಶ್ರಮದಾನ ಕೆಲಸಗಳನ್ನು ನಡೆಸಲಾಯಿತು. ಈ ಪುಣ್ಯಕಾರ್ಯದಲ್ಲಿ ಸಾರ್ವಜನಿಕರು , ಸಜ್ಜನ ಬಂಧುಗಳು, ತಾಯಂದಿರು ಭಾಗವಹಿಸಿದ್ದರು.

ಶ್ರಮದಾನದಲ್ಲಿ ಭಾಗಿಯಾದ ಎಲ್ಲರಿಗೂ ದೇವಸ್ಥಾನದ ಆಡಳಿತ ಮಂಡಳಿಯ ಕೃತಜ್ಞತೆಗಳನ್ನು ಸಲ್ಲಿಸಿದರು. ತಾಯಿ ಮಹಿಷಮರ್ದಿನಿ ಎಲ್ಲರಿಗೂ ಆಯುಷ್ಯ ಆರೋಗ್ಯ ಸುಖ ಶಾಂತಿ ನೆಮ್ಮದಿ ನೀಡಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.