ಕರ್ನಾಟಕ ಸರಕಾರ,ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ). ಉಪನಿರ್ದೇಶಕರ ಕಛೇರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಇದರ ಸಹಯೋಗದೊಂದಿಗೆ ದಿನಾಂಕ 05/11/2024 ರಂದು ಮಂಗಳವಾರ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ 2024 – 2025 ರ ಕರಾಟೆ ಸ್ಪರ್ಧೆಯಲ್ಲಿ ಮಾಸ್ಟರ್ ಶ್ರವಣ್ ಪೂಜಾರಿ ತೋಕೂರು ತೃತೀಯ ಸ್ಥಾನ ಪಡೆದಿರುತ್ತಾರೆ. ಇವರು ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು,ಹಳೆಯಂಗಡಿ ಇದರ ಕರಾಟೆ ತರಗತಿಯ ವಿದ್ಯಾರ್ಥಿಯಾಗಿದ್ದು,ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ಹಾಗೂ ಕರಾಟೆ ತರಗತಿಯ ತರಬೇತುದಾರರಾದ ಶ್ರೀ ಸುಶಾನ್ ದೇವಾಡಿಗ ಇವರ ಶಿಷ್ಯರಾಗಿದ್ದು,ಪ್ರಸ್ತುತ ಮೂಲ್ಕಿ ಜೂನಿಯರ್ ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿ ಆಗಿರುತ್ತಾರೆ.
ತೋಕೂರು ಸ್ಪೋರ್ಟ್ಸ್ ಕ್ಲಬ್ ನ ಕರಾಟೆ ತರಗತಿಯ ವಿದ್ಯಾರ್ಥಿ ಶ್ರವಣ್ ಪೂಜಾರಿ ಗೆ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ
RELATED ARTICLES