Monday, February 10, 2025
Homeಧಾರ್ಮಿಕಬಿಜೆಪಿ ಕಾರ್ಕಳ ಮಹಿಳಾ ಮೋರ್ಚಾದಿಂದ ಅದ್ಧೂರಿಯ “ಶ್ರಾವಣ ಸಂಭ್ರಮ” ಕಾರ್ಯಕ್ರಮ

ಬಿಜೆಪಿ ಕಾರ್ಕಳ ಮಹಿಳಾ ಮೋರ್ಚಾದಿಂದ ಅದ್ಧೂರಿಯ “ಶ್ರಾವಣ ಸಂಭ್ರಮ” ಕಾರ್ಯಕ್ರಮ

ಕಾರ್ಕಳ: ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲದ ಮಹಿಳಾ ಮೋರ್ಚಾದಿಂದ ತುಳುನಾಡಿನ ಸಂಸ್ಕೃತಿ-ಸಂಪ್ರದಾಯ-ಸಂಸ್ಕಾರಗಳನ್ನು ಬಿಂಬಿಸುವ ವಿನೂತನ ಕಾರ್ಯಕ್ರಮ ಸೆಪ್ಟೆಂಬರ್ 01 ರಂದು ಕಾರ್ಕಳದ ಶ್ರೀ ರಾಮಕ್ಷತ್ರಿಯ ಸಭಾಭವನದಲ್ಲಿ ವಿಜೃಂಭಣೆಯಿಂದ ಜರುಗಿತು. ಮಹಿಳೆಯರು ಪ್ರಮುಖವಾಗಿ ಆಚರಿಸುವ ಸಾಲು-ಸಾಲು ಹಬ್ಬಗಳು ಪವಿತ್ರವಾದ ಶ್ರಾವಣ ಮಾಸದಲ್ಲಿ ಬರುತ್ತದೆ. ತುಳುನಾಡಿನ ಗ್ರಾಮೀಣ ಜನರ ಬದುಕು, ಜನಪದೀಯ ಆಚರಣೆಗಳು ಅವಲಂಬಿತವಾಗಿರುವುದರಿಂದ ಬಿಜೆಪಿ ಕಾರ್ಕಳ
ಮಹಿಳಾ ಮೋರ್ಚಾ ಜಾನಪದ ಸಂಸ್ಕೃತಿಯ ಉಳಿವಿಗಾಗಿ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬಂದಿರುತ್ತದೆ. ಸಂಪ್ರದಾಯದಂತೆ ಮಹಿಳೆಯರನ್ನು ಅರಿಶಿನ, ಕುಂಕುಮ ಹಚ್ಚಿ, ಹೂವು, ಬಳೆ, ರವಿಕೆ ಕಣ ನೀಡಿ ಸ್ವಾಗತಿಸಲಾಯಿತು.
ಮುತ್ತೈದೆಯರಿಗೆ ಬಾಗಿನ ಸಮರ್ಪಣೆ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ಮಹಾಶಕ್ತಿಕೇಂದ್ರಗಳಿಂದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸುಮಾರು 22 ತಂಡಗಳಲ್ಲಿ ಭಾಗವಹಿಸಿ ದೇಶಭಕ್ತಿಗೀತೆ, ಜಾನಪದ ಹಾಡು ಮತ್ತು ನೃತ್ಯಗಳ ಪ್ರದರ್ಶನ ನೀಡಿ ಅದ್ಭುತವಾದ ಮನೋರಂಜನಾ ಲೋಕ ಸೃಷ್ಟಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ನಡೆದ ಅಭಿನಂದನಾ ಸಭಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಪಕ್ಷದ ಹಿರಿಯ ಮಾರ್ಗದರ್ಶಕರು ಮತ್ತು ಖ್ಯಾತ ಉದ್ಯಮಿಗಳಾದ ಶ್ರೀ ಬೋಳ ಪ್ರಭಾಕರ ಕಾಮತ್ ರವರು ಮಾತನಾಡಿ ಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶ್ರಾವಣ ಮಾಸದ ಮಹತ್ವವನ್ನು ಅರಿತು ಅನೇಕ ಆಚರಣೆಗಳನ್ನು ಮೆಲುಕು ಹಾಕುವ ಮೂಲಕ ಶ್ಲಾಘನೀಯ ಕಾರ್ಯಕ್ರಮದ ಆಯೋಜನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಬಿಜೆಪಿಯ ಕಾರ್ಯದರ್ಶಿಗಳಾದ ವಿ ಸುನಿಲ್ ಕುಮಾರ್ ಅವರು ಮಾತನಾಡಿ ಮಹಿಳಾ ಮೋರ್ಚಾದ ಕಾರ್ಯಕ್ರಮದಿಂದ ಹಿರಿಯ ಸದಸ್ಯರೆಲ್ಲರೂ ಅತ್ಯಂತ ಉತ್ಸಾಹದಿಂದ ಈ ಸಂಭ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿನೂತನ ಚರಿತ್ರೆಗೆ ಮುನ್ನುಡಿ ಬರೆದಿರುವುದು ತುಂಬಾ ಹೆಮ್ಮೆಯ ಸಂಗತಿ. ರಾಜಕೀಯ ಚಟುವಟಿಕೆಗಳ ಜೊತೆ ಜೊತೆಗೆ ತಮ್ಮಲ್ಲಿರುವ ಪ್ರತಿಭೆಗಳನ್ನು ವ್ಯಕ್ತಪಡಿಸುವ ಅವಕಾಶವನ್ನು ಅತ್ಯುತ್ತಮ ರೀತಿಯಲ್ಲಿ ಪ್ರದರ್ಶಿಸಿರುವುದು ಸಂತಸ ತಂದಿದೆ ಇಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹೇಳಿದರು. ಮಹಿಳಾ ಮೋರ್ಚಾದ ತಾಲೂಕು ಅಧ್ಯಕ್ಷೆ ವಿನಯಾ ಬಂಗೇರ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ ಸ್ವಾಗತಿಸಿದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ರಮೇಶ್ ಮಾತನಾಡಿ ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳನ್ನು ಮಹಿಳೆಯರು ಒಟ್ಟಾಗಿ ಸೇರಿ ಆಚರಣೆ ಮಾಡುವುದರಿಂದ ಸಂಘಟನೆಗೆ ಮತ್ತು ಹಿಂದೂ ಸಂಪ್ರದಾಯಗಳಿಗೆ ಬಲ ತುಂಬಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಕಳ ಮಂಡಲ ಅಧ್ಯಕ್ಷರಾದ ನವೀನ್ ನಾಯಕ್ ಮಾತನಾಡಿ ಕಾರ್ಯಕ್ರಮ ನಿರಂತರವಾಗಿ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಮುಖರಾದ ಮಹಾವೀರ ಹೆಗ್ಡೆ, ಶ್ಯಾಮಲ ಕುಂದರ್ ಸತೀಶ್ ಶೆಟ್ಟಿ ಮುಟ್ಲುಪಾಡಿ, ಅನಿತಾ ಮರವಂತೆ,ಮಾಲಿನಿ ಜಿ ಶೆಟ್ಟಿ, ರೇಷ್ಮಾ ಉದಯ ಶೆಟ್ಟಿ, ಸವಿತಾ ಕೋಟ್ಯಾನ್, ಸುಗಂಧಿ, ಕವಿತಾ ಹರೀಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸುಮಾ ರವಿಕಾಂತ್ ಮತ್ತು ಕಾವ್ಯ ಕಣಜಾರು ಕಾರ್ಯಕ್ರಮವನ್ನು ನಿರೂಪಿಸಿ, ಮಮತಾ ಸುವರ್ಣ ರವರು ವಂದಿಸಿದರು.

RELATED ARTICLES
- Advertisment -
Google search engine

Most Popular