Tuesday, January 14, 2025
HomeUncategorizedಶ್ರೀಚಕ್ರ ಪೀಠ ಸುರಪೂಜಿತ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಶ್ರೀ ರಾಮನಾಮ ತಾರಕ ಮಂತ್ರ ಹೋಮ

ಶ್ರೀಚಕ್ರ ಪೀಠ ಸುರಪೂಜಿತ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಶ್ರೀ ರಾಮನಾಮ ತಾರಕ ಮಂತ್ರ ಹೋಮ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ರಾಮನಾಮ ತಾರಕ ಮಂತ್ರ ಹೋಮವು ಕ್ಷೇತ್ರದ ಧರ್ಮದರ್ಶಿ, ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ..

ಶ್ರೀ ರಾಮ ನಾಮ ತಾರಕ ಮಂತ್ರವು ಬಹುಶಕ್ತಿಯುತವಾಗಿದ್ದು ದುಷ್ಟರ ಸಂಹಾರ ಹಾಗೂ ಶಿಷ್ಟರಿಗೆ ಸಂರಕ್ಷಣೆ ಮಾಡುವಂತ ಹುದಾಗಿದೆ. ಭಗವಾನ್ ಶ್ರೀ ರಾಮನ ಒಂದು ನಾಮವು ಶ್ರೀ ಶ್ರೀ ವಿಷ್ಣುವಿನ ಸಾವಿರ ನಾಮಗಳಿಗೆ ಸಮಾನವಾಗಿರುತ್ತದೆ.. ಜೀವನದಲ್ಲಿ ಬರುವ ತೊಂದರೆಯನ್ನು ನಿವಾರಿಸಿ ಸುಖಮಯ ಜೀವನ ಪ್ರಾಪ್ತಿಯಾಗುವ
ಈ ಬಹು ಪುಣ್ಯ ಪ್ರದಯಾಗವು ಗುರುವಾರದಂದು ಬೆಳಿಗ್ಗೆ ಗಂಟೆ 9ಕ್ಕೆ ಆರಂಭವಾಗಲಿದೆ.. ಯಾಗದ ಅಂಗವಾಗಿ ಬ್ರಾಹ್ಮಣರಾಧನೆಯು, ಹಾಗೂ ಅನ್ನ ಸಂತರ್ಪಣೆ ಕ್ಷೇತ್ರದಲ್ಲಿ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

RELATED ARTICLES
- Advertisment -
Google search engine

Most Popular