Monday, December 2, 2024
Homeಉಡುಪಿಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ರಂಗಪೂಜಾ ಮಹೋತ್ಸವ ಸಂಪನ್ನ

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ರಂಗಪೂಜಾ ಮಹೋತ್ಸವ ಸಂಪನ್ನ

ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವದ ವಿಜಯದಶಮಿಯ ಪರ್ವಕಾಲದಲ್ಲಿ ಮಹಾ ರಂಗಪೂಜ ಮಹೋತ್ಸವ ನೆರವರಿತು..
ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಮಾರ್ಗದರ್ಶನದಲ್ಲಿ ವೇದಮೂರ್ತಿ ಸರ್ವೇಶ್ ತಂತ್ರಿಗಳು ನಡೆಸಿಕೊಟ್ಟ ಮಹಾ ರಂಗಪೂಜೆಯಲ್ಲಿ ತಂತ್ರಿಗಳು ದೇವಿಯ ಧ್ಯಾನವನ್ನು ಉಲಿದರು.. ದೀಪಾರಾದನೆಯ ಸಹಿತ ನೆರವೇರುವ ರಂಗ ಪೂಜೆಯ ಮಹತ್ವ ವನ್ನು ನೆರೆದ ಭಕ್ತ ಸಮೂಹಕ್ಕೆ ಮನ ಮುಟ್ಟುವಂತೆ ವರ್ಣಿಸಿದರು…
ರಂಗಪೂಜೆಯಲ್ಲಿ ತಪ್ತತ್ ದೇವತೆಗಳಿಗೆ ಉಣಬಡಿಸಿದ ಅಪೂಪ ಕದಳಿ ಸಹಿತ ವಾದ ಅನ್ನ ಮುದ್ರೆಯನ್ನು ನೆರೆದ ಭಕ್ತರುಗಳಿಗೆ ವಿತರಿಸಲಾಯಿತು.. ಈ ಅನ್ನ ಮುದ್ರೆಯ ಸೇವನೆಯಿಂದ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ಪ್ರತೀತಿ ಇರುವ ಹಿನ್ನೆಲೆಯಲ್ಲಿ ಕ್ಷೇತ್ರದ ರಂಗ ಪೂಜೆಯ ಅನ್ನ ಮುದ್ರೆಗೆ ಭಕ್ತರು ಮುಗಿ ಬೀಳುತ್ತಾರೆ..
ಮಹಾ ರಂಗಪೂಜೆಯನ್ನು ವೀಕ್ಷಿಸಲು ಕ್ಷೇತ್ರದ ಆವರಣದಲ್ಲಿ ಭಕ್ತ ಗಣನ ಕಿಕ್ಕಿರಿದು ತುಂಬಿತ್ತು.
ವಿಜಯದಶಮಿಯ ಪರ್ವಕಾಲದಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೂ ಅನ್ನಪ್ರಸಾದ ನಿರಂತರವಾಗಿ ಕ್ಷೇತ್ರದಲ್ಲಿ ಭಕ್ತರಿಗೆ ಉಣಭಡಿಸಲಾಗಿತ್ತು..
10 ಸಹಸ್ರಕ್ಕೂ ಮಿಕ್ಕಿದ ಭಕ್ತರುಗಳು ವಿಜಯದಶಮಿಯ ಪರ್ವಕಾಲದಲ್ಲಿ ಕ್ಷೇತ್ರ ಸಂದರ್ಶಿಸಿ, ಪುನೀತರಾದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ

RELATED ARTICLES
- Advertisment -
Google search engine

Most Popular