Tuesday, January 14, 2025
HomeUncategorizedಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆ ಕಲ್ಕುಡ ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲನ್ಯಾಸ

ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆ ಕಲ್ಕುಡ ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲನ್ಯಾಸ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿಯ ಪ್ರಧಾನ ದೈವವಾದ ಕಲ್ಕುಡ ಹಾಗೂ ಕಲ್ಲುರ್ಟಿ ದೈವಗಳಿಗೆ ನೂತನ ಗುಡಿಯ ನಿರ್ಮಾಣ ಕಾರ್ಯದ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮವಾಗಿ ಶಿಲಾನ್ಯಾಸ ಕಾರ್ಯಕ್ರಮವು ಕ್ಷೇತ್ರದ ಧರ್ಮದರ್ಶಿ, ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀಯುತ ಅನಿಶ್ ಆಚಾರ್ಯ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಭೂಗತ ಗೊಂಡಿದ್ದ ಶಕ್ತಿ ಕ್ಷೇತ್ರವು ಪುನಶ್ಚೇತನಗೊಂಡು ತನ್ನ ಕಾರಣಿಕದ ಅಸ್ತಿತ್ವದಿಂದ ಬೇಡಿ ಬಂದ ಭಕ್ತರ ಇಷ್ಟಾರ್ಥವನ್ನು ಕರುಣಿಸಿ ಶಕ್ತಿ ಕ್ಷೇತ್ರವೆನಿಸಿದ ಪ್ರಧಾನ ದೈವವಾದ ಕಲ್ಕುಡ ಕಲ್ಲುರ್ಟಿ ಕೂಡ ಅಸಂಖ್ಯಾತ ಭಕ್ತರಿಂದ ಆರಾಧನೆ ಪಡೆದುಕೊಳ್ಳುತ್ತಿದೆ..

ಕ್ಷೇತ್ರ ದೈವದಿಂದ ಅನುಗ್ರಹಿತರಾದ ಉದ್ಯಮಿಗಳಾದ ಕಲ್ಲಡ್ಕ ಪುರುಷೋತ್ತಮಶೆಟ್ಟಿ ಮತ್ತು ಮನೆಯವರ ಭಾಪ್ತು, ಈ ನೂತನ ಗುಡಿಯು ನಿರ್ಮಾಣಗೊಳ್ಳಲಿದೆ.
ಶಿಲನ್ಯಾಸ ಕಾರ್ಯಕ್ರಮದಲ್ಲಿ ಕಾಷ್ಟ ಶಿಲ್ಪಿ ಜಗದೀಶ್ ಆಚಾರ್ಯ ಗುತ್ತಿಗೆದಾರ ಸುದರ್ಶನ್ ಕಲ್ಮಾಡಿ ಉದ್ಯಮಿ ಆನಂದ ಬಾಯಿರಿ ಶ್ರೀಮತಿ ಉಷಾ ರಮಾನಂದ ಕಿಲ್ಪಾಡಿ ಶಾರದಾ ಗೋವಿಂದ ಭಟ್ ಶ್ರೀಮತಿ ಸ್ವಾತಿ ಪ್ರತಿಕ್ ಕುಮಾರಿ ಮೃಣಾಲ್ ಕೃಷ್ಣ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಪೂರ್ಣಜವಾಬ್ದಾರಿಯನ್ನು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ನಿಭಾಯಿಸಿದರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular