ಬಂಟ್ವಾಳ: ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಸ್ಥಾನದಲ್ಲಿ 18ನೇ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು 50ನೇ ವರ್ಷದ ಭಜನಾ ಮಂಗಲೋತ್ಸವ ಪ್ರಯುಕ್ತ ಹನುಮಗಿರಿ ಮೇಳದಿಂದ ಭಾನುವಾರ ರಾತ್ರಿ ನಡೆದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸ್ಥಳೀಯ ಕಾಡಬೆಟ್ಟು ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆಯಲ್ಲಿ 5,6 ಮತ್ತು 7ನೇ ತರಗತಿ ಮತ್ತು ಕಾವಳಪಡೂರು ವಗ್ಗ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಗಳಿಸಿದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಉದ್ಯಮಿ ಸಿ.ಅನಂತ ಪೈ ವಾಮದಪದವು ಇವರು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹನುಮಗಿರಿ ಮೇಳದ ಮೆನೇಜರ್ ಹರೀಶ ಬೊಳಂತಿ ಮೊಗರು ಶುಭ ಹಾರೈಸಿದರು. ಉತ್ಸವ ಸಮಿತಿ ಗೌರವ ಸಲಹೆಗಾರ ಎಂ.ಬೂಬ ಸಪಲ್ಯ ಮುಂಡಬೈಲು, ಕಾರ್ಯಾಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಪ್ರಮುಖರಾದ ಜಗದೀಶ ಕುಂದರ್, ಅಭಿಷೇಕ್ ಪಿಲಿಂಗಾಲು ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ವಂದಿಸಿದರು.