ಸುರತ್ಕಲ್: ಶ್ರೀ ಜಾರಂತಾಯ ದೈವಸ್ಥಾನ ಅಗರಮೇಲು ಸುರತ್ಕಲ್‌ನಲ್ಲಿ ಕಾಲಾವಧಿ ಬಂಡಿ ಉತ್ಸವವು ಮಾ. 24, 25ರಂದು ಜರಗಲಿದೆ. ಮಾ. 24ರಂದು ಧ್ವಜಾರೋಹಣ, ದೀಪಾರಾಧನೆ, ಮಾ. 25ರಂದು ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 7 ಗಂಟೆಗೆ ಹೂವಿನ ಪೂಜೆ, ರಾತ್ರಿ ಜಾರಂತಾಯ ದೈವದ ಬಂಡಿ ಉತ್ಸವ, ರಾತ್ರಿ 10 ಗಂಟೆಗೆ ಸುರತ್ಕಲ್ ಕುಚ್ಚಿಗುಡ್ಡೆ ಶ್ರೀ ಕೊರ್ದಬ್ಬು ದೈವದ ಭಂಡಾರ ಆಗಮನ, ರಾತ್ರಿ 3.30 ಗಂಟೆಗೆ ಶ್ರೀ ಜಾರಂತಾಯ ಮತ್ತು ಶ್ರೀ ಕೊರ್ದಬ್ಬು ದೈವದ ಭೇಟಿ ನಡೆಯಲಿದೆ.