ಶ್ರೀ ಕಾಲಭೈರವ ದೇವರಿಗೆ ದ್ವೀತಿಯ ವರ್ಧಂತ್ಯುತ್ಸವ ಪ್ರಯುಕ್ತ ಅಷ್ಟೋತ್ತರ ಕಲಶ, ತತ್ವ ಹೋಮ, ಅಧಿವಾಸ ಹೋಮ, ವಿಶೇಷ ಪಂಚಾಮೃಭಿಷೇಕ, ಕಲಾಶಭಿಷೇಕ, ಮಹಾಪೂಜೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ, ಗುರುಪಾದ ಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು.
ಸಂಜೆ 5.00 ರಿಂದ ‘ಭಜನೆ’ ದೀಪೋತ್ಸವ, ದೇವರ ಉತ್ಸವ, ಮಹಾಪೂಜೆ ಕ್ಷೇತ್ರದ ತಂತ್ರಿಗಳಾದ ವೇದರ್ಮೂತಿ, ಬ್ರಹ್ಮಶ್ರೀ ನೀಲಾವರ ರಘುರಾಮ ಮಧ್ಯಸ್ಥರ ನೇತ್ರತ್ವದಲ್ಲಿ ಕ್ಷೇತ್ರದ ಜೋಯಿಸರಾದ ರಾಮಚಂದ್ರ ನಾವುಡ ತೆಂಕಬೆಟ್ಟು ಹಾಗೂ ಕ್ಷೇತ್ರ ಅರ್ಚಕರುಗಳ ಸಹಾಕರದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಮಂಗಳೂರು ಮಹಾ ಸಂಸ್ಥಾನ ಶಾಖಾ ಮಠ ಕಾವೂರು ಶ್ರೀ ಕ್ಷೇತ್ರ ಆದಿಚುಂಚನಗಿರಿ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಕತ್ತಲೊಳಗಿನ ಬೆಳಕನ್ನು ನೋಡಲು ಅಂತರಂಗದ ಕಣ್ಣು ತೆರೆಯಬೇಕು. ಹಾಗೆಯೇ ಮೇಲ್ನೋಟಕ್ಕೆ ಭೀಕರನಂತೆ ಕಾಣುವ ಕಾಲಭೈರವ ಪರಿಪೂರ್ಣ ಜ್ಞಾನಿ. ಮನದೊಳಗಿನ ಅಜ್ಞಾನವನ್ನು ಹೊಡೆದೋಡಿಸುವ ಸುಜ್ಞಾನಿ. ಅಸೀಮ ಆನಂದದ ಪ್ರತೀಕ. ಈ ಹಿನ್ನೆಲೆಯಲ್ಲೇ ಕಾಲಭೈರವನ ಆರಾಧನೆ ಎಲ್ಲೆಡೆ ನಡೆಯುತ್ತದೆ ಎಂದರು.
ರಾಜ್ಯಮಟ್ಟದ ಸಹಕಾರಿ ಹಾಗೂ ಹೈನುಗಾರಿಕೆ ಪ್ರಶಸ್ತಿ ಪುರಸ್ಕೃತರಾದ ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ವಿಶೇಷ ವಿಶೇಷ ಸನ್ಮಾನ ನೀಡಿ ಗೌರವಿಸಲಾಯಿತು.
ಆರೋಗ್ಯ ನಿಧಿ ಮತ್ತು ವಿದ್ಯಾನಿಧಿಯನ್ನು ವಿತರಿಸಲಾಯಿತು.ಸಾಹಿತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಂಕರ ಯು. ಜೋಗಿ ಮಂಜೇಶ್ವರ, ನಿವೃತ್ತ ಯೋಧರು ರಾಜೇಶ್ ಗಂಗೊಳ್ಳಿ, ರಂಗಭೂಮಿ ಕಲಾವಿದ ಪ್ರಸಾದ್ ಜೋಗಿ, ಲೈನ್ ಮ್ಯಾನ್ ಶಿವರಾಮ ದೇವಾಡಿಗ ,ಬಾಲ ಪ್ರತಿಭೆ ಕುಮಾರಿ ಪ್ರತಿೇಕ್ಷಿತ, ಕಾರ್ತಿಕ್ ಜೋಗಿ ಮತ್ತು ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸ್ಥಳೀಯ ಮಕ್ಕಳಿಂದ ವಿವಿಧ ಮನೋರಂಜನ ಕಾರ್ಯಕ್ರಮ ಓಂಕಾರ ಕಲಾವಿದರ ನಿರ್ದೆಶನದಲ್ಲಿ ಆಪುದೆಲ್ಲಾ ಒಳ್ಳೆದಕ್ಕೆ ಎಂಬ ನಾಟಕ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಟಿ. ದಿನೇಶ್ ನಾಗಪ್ಪಯ್ಯ ನಾವುಡ, ರಾಜೇಶ್ ಕಾರಂತ್ ಹರಿನಾಥ್ ಜೋಗಿ ಮಂಗಳೂರು, ಅಣ್ಣಪ್ಪ ಎಂ ಜೋಗಿ, ಪಾಂಡುರಂಗ ಜೋಗಿ ಕೋಟೆಶ್ವರ, ಮಹೇಶ್ ಮುಂಡರಗಿ ಹುಬ್ಬಳ್ಳಿ ಟಿ .ಎನ್.ನಾಗೇಶ್ ಜೋಗಿ ಅಧ್ಯಕ್ಷರು ಆಡಳಿತ ಮಂಡಳಿ , ನಂಬಿದ ಕುಟುಂಬಸ್ಥರು ಊರಿನ ಗ್ರಾಮಸ್ಥರು ಉಪಸ್ಥಿರಿದ್ದರು.
ರಾಘವೇಂದ್ರ ಜೋಗಿ ಸ್ವಾಗತಿಸಿದರು ಸುಬ್ರಹ್ಮಣ್ಯ ಜಿ ಉಪ್ಪುಂದ ನಿರೂಪಿಸಿದರು.