ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ ಹಿಂದಿ ದಿನಾಚರಣೆಯ ಸಂದರ್ಭದಲ್ಲಿ ನ್ಯೂ ವೈಬ್ರಂಟ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಹಿಂದಿ ವಿಭಾಗ ಮುಖ್ಯಸ್ಥರಾದ ಡಾ.ವಿ ರಶ್ಮಿ ಅರಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಾ , ‘ಹಿಂದಿ ಭಾಷೆ ಭಾರತದ ಅಧಿಕೃತ ಭಾಷೆ ಆಗಿದ್ದು ಅದು ರಾಷ್ಟ್ರ ಭಾಷೆ ಆಗಬೇಕೆಂದು ಕರೆ ಕೊಟ್ಟರು. ದೇಶದ ಹಲವೆಡೆ ಹಿಂದಿ ಮಾತನಾಡುವ ಜನರಿದ್ದಾರೆ. ಹಿಂದಿ ಯಾರಿಗೂ ಹೇರಿಕೆಯಲ್ಲ, ಅದನ್ನು ಅಭಿಮಾನದಿಂದ ಎಲ್ಲರೂ ಸ್ವೀಕರಿಸಬೇಕು. ಪರ್ವತ ಸಾಲು ದೇಶವನ್ನು ರಕ್ಷಿಸುವಂತೆ, ಹಿಂದಿ ಭಾಷೆ ಕಲಿತರೆ ಅದು ವ್ಯಕ್ತಿಯನ್ನು ಎಲ್ಲಾ ಸಂದರ್ಭದಲ್ಲಿಯೂ ರಕ್ಷಿಸುತ್ತದೆ. ಹಿಂದಿ ಬಗ್ಗೆ ಅಭಿಮಾನ ಹಾಗೂ ಅಭಿರುಚಿ ಅತ್ಯಗತ್ಯ ಎಂದು ತಿಳಿಸಿದರು. ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಮಾತನಾಡಿ, ಹಿಂದಿ ಬಹಳ ಸರಳವಾದ, ಮಧುರವಾದ ಭಾಷೆಯಾಗಿದೆ ಎಂದು ತಿಳಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿಂದಿ ವಿಭಾಗದಿಂದ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಹಿಂದಿ ವಿಭಾಗ ಮುಖ್ಯಸ್ಥೆ ಶಾರದಾ, ಉಪನ್ಯಾಸಕಿ ಮೊನಿಶಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶ್ರುತಿ ಸ್ವಾಗತಿಸಿ, ವೈಷ್ಣವಿ ವಂದಿಸಿದರು. ಕೌಶಿಕ್ ಅತಿಥಿ ಪರಿಚಯ ಮಾಡಿದರು. ರೋಹಿಸ್ಟನ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮ ನಡೆಯಿತು.
ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆ ಹಿಂದಿ ದಿನಾಚರಣೆ
RELATED ARTICLES