ಶ್ರೀ ಮೇಘವರ್ಣ ಮೂವೀಸ್, ಫ್ರೆಂಡ್ಸ್ ಅರ್ಪಿಸುವ, ಡ್ರೀಮ್ ಕ್ಯಾಚರ್ಸ್ ಪುತ್ತೂರು ಇದರ ಸಹಯೋಗದಲ್ಲಿ ಗಂಗರಾಜ್ ಪಿ. ಆರ್ ನಿರ್ದೇಶನದ ನಂಬರ್ ಪ್ಲೇಟ್ ಚಿತ್ರದ ಮುಹೂರ್ತ ಸೆಪ್ಟೆಂಬರ್ 11 ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಹಿಂದೂ ಮುಖಂಡರಾದ ಶ್ರೀ ಅರುಣ್ ಕುಮಾರ್ ಪುತ್ತಿಲರವರು ಈ ಮುಹೂರ್ತ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ, ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ವೇಷಧಾರಿ, ಗ್ರೂಫಿ, ಶತ್ರುಘ್ನ ಚಿತ್ರದ ನಾಯಕ ನಟರಾದ ಪುತ್ತೂರಿನ ಆರ್ಯನ್ ಈ ಚಿತ್ರದಲ್ಲಿ ನಾಯಕರಾಗಿದ್ದು. ಡ್ರೀಮ್ ಕ್ಯಾಚರ್ಸ್ ಆಕ್ಟಿಂಗ್ ಕ್ಲಾಸ್ ನ ಕೀರ್ತಿ ಗೌಡ ನಾಯಕಿಯಾದರೆ, ಅದೇ ಆಕ್ಟಿಂಗ್ ಕ್ಲಾಸ್ ನಲ್ಲಿ ತರಬೇತಿ ಪಡೆದಿರುವ, ಚನ್ನು ಬಿರ್ವಾ, ಶರತ್ ಗಿರಿವನ, ವಿದ್ಯಾಶ್ರೀ, ಸೌಮ್ಯಶ್ರೀ, ಪವಿತ್ರ, ರತನ್ ಗೌಡ, ಯತೀಶ್ ಕುಲಾಲ್, ಅಶ್ವಥ್ ನಾಯ್ಕ್, ಶೋಭಾ ಬೆಳ್ಳಾರೆ,ಮೋನಿಕಾ ಮುಖ್ಯ ತಾರಗಣದಲ್ಲಿದ್ದಾರೆ.
ಡಿ-ಬಾಸ್ ದರ್ಶಸ್ ಸರ್ ಅವರ ಆಶೀರ್ವಾದದೊಂದಿಗೆ ಆರಂಭಗೊಳ್ಳಲಿರುವ ಈ ಚಿತ್ರಕ್ಕೆ ರವಿ ರಾಮದುರ್ಗ ಅವರ ಛಾಯಾಗ್ರಾಹಣ, ಹೇಮಂತ್ ಕುಮಾರ್ ಅವರ ಸಂಗೀತ, ಶ್ರೀಧರ್ ತುಮಕೂರ್ ಅವರ ಸಾಹಿತ್ಯ, ಗೌರೀಶ್ ಅವರ ನೃತ್ಯ ಸಂಯೋಜನೆ, ಫಯಾಜ್ ಖಾನ್ ಹಾಗೂ ಚಿನ್ನಯ್ಯ ರವರ ಸಾಹಸನಿರ್ದೇಶನವಿದೆ.
ನಂಬರ್ ಪ್ಲೇಟ್ ಚಿತ್ರದ ಬಹುತೇಕ ಚಿತ್ರೀಕರಣವು ಪುತ್ತೂರು, ಸುಳ್ಯದ ಆಸು-ಪಾಸು ನಡೆಯಲಿದೆ ಎಂದು ಚಿತ್ರದ ನಿರ್ದೇಶಕರಾದ ಗಂಗರಾಜ್ ಪಿ. ಆರ್ ತಿಳಿಸಿದ್ದಾರೆ.