Sunday, July 14, 2024
Homeಧಾರ್ಮಿಕಶ್ರೀ ರಜತ ಕವಚ ಸಮರ್ಪಣೆ ಪುರಮೆರವಣಿಗೆ

ಶ್ರೀ ರಜತ ಕವಚ ಸಮರ್ಪಣೆ ಪುರಮೆರವಣಿಗೆ

ಬೈಂದೂರು:ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ಶ್ರೀರಾಮ ದೇವಸ್ಥಾನದಲ್ಲಿ ಏಪ್ರಿಲ್ 10 ರಿಂದ ಏಪ್ರಿಲ್ 22 ರ ತನಕ ನಡೆಯಲಿರುವ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ದೇವರಿಗೆ ಸಮರ್ಪಣೆ ಮಾಡಲಿರುವ ರಜತ ಕವಚ ಪುರ ಮೆರವಣಿಗೆ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಶ್ರೀರಾಮ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು, ಅನ್ನದಾನ ಸೇವೆ ನಡೆಯಿತು.

ತ್ರಾಸಿ ಸರ್ಕಲ್ ನಿಂದ ಶ್ರೀರಾಮ ಮಂದಿರ ವರೆಗೆ ಭವ್ಯ ಮೆರವಣಿಗೆ ಸಾಗಿತು.

ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಣಯ್ ಕುಮಾರ್ ಶೆಟ್ಟಿ ಮಾತನಾಡಿ, ಮೀನುಗಾರರ ಆರಾಧ್ಯ ದೇವರಾದ ಕಂಚುಗೋಡು ಶ್ರೀರಾಮ ದೇವಸ್ಥಾನದಲ್ಲಿ ಸುವರ್ಣ ಮಹೋತ್ಸವ ಸಂಭ್ರಮ ಸಂಭ್ರಮ ಅದ್ದೂರಿಯಾಗಿ ಆಚರಣೆಗೊಳ್ಳಲಿದೆ. ಶ್ರೀರಾಮ ದೇವರ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರು ಮತ್ತು ಮಹಿಳಾ ಸಮಿತಿ ಅಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.

ಏಪ್ರಿಲ್ 10 ರಿಂದ ಏಪ್ರಿಲ್ 22 ರ ವರೆಗೆ ಕಂಚುಗೋಡು ಶ್ರೀರಾಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ.ಪ್ರತಿದಿನ ಅನ್ನದಾನ ಸೇವೆ ಜರುಗಲಿದೆ.

RELATED ARTICLES
- Advertisment -
Google search engine

Most Popular