Saturday, April 26, 2025
Homeಉಡುಪಿಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ : ಲಕ್ಷ ತುಳಸಿ ಅರ್ಚನೆ

ಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ : ಲಕ್ಷ ತುಳಸಿ ಅರ್ಚನೆ

ಶ್ರೀ ರಾಮ ಮಂದಿರ  ಜಿ ಎಸ್ ಬಿ ಸಮಾಜ ಮಲ್ಪೆ ಇಲ್ಲಿನ ಶ್ರೀ ರಾಮಚಂದ್ರ ದೇವರ ಪ್ರತಿಷ್ಠೆಯಾಗಿ  25 ವರ್ಷದ  ರಜತ ಮೋಹೋತ್ಸವ ಹಾಗೂ  ಆಷಾಢ  ಏಕಾದಶೀ ಪ್ರಯುಕ್ತ  ಬುಧವಾರ ಬೆಳ್ಳಿಗೆ ಸಾಮೂಹಿಕ ಪ್ರಾರ್ಥನೆ , ಲಕ್ಷ ತುಳಸಿ  ಅರ್ಚನೆ  , ಶ್ರೀ ದೇವರಿಗೆ ವಿಶೇಷ ಅಲಂಕಾರ , ಶ್ರೀ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಶ್ರೀ ರಾಮ ನಾಮ ಜಪ ನೆಡೆಸಲಾಯಿತು , ಬಳಿಕ ಮಹಾಪೂಜೆ ಪ್ರಸಾದ ವಿತರಣೆ ನೆಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ಶ್ರೀ ರಾಮ ಮಂದಿರದಲ್ಲಿ  ಪ್ರತಿ ವರ್ಷ ನೆಡೆಯುವ ಲಕ್ಷ ತುಳಸಿ  ಅರ್ಚನೆಗೆ ಕಳೆದ 25 ವರ್ಷಗಳಿಂದ ತುಳಸಿ ದಳವನ್ನು ನೀಡಿ ಸಹಕರಿತ್ತಿರುವ ನಾರಾಯಣ ಶೆಣೈ ಗಾವಳಿ , ಸುರೇಂದ್ರ ಕಾಮತ್  ಮರ್ಣೆ, ಯಶವಂತ್ ಕಾಮತ್ ಹೆಬ್ರಿ ,ಉದಯ ಶೆಣೈ ಹೆಬ್ರಿ ಇವರನ್ನು ಗೌರವಿಸಲಾಯಿತು.  ಪ್ರಸಿದ್ಧ ಕಲಾವಿದರಾದ ನಾಗೇಶ್ ಅಡ್ಗಾಂವ್ಕರ್, ಪುಣೆ ಮತ್ತು ತಂಡದವರಿಂದ  “ಅಭಂಗ ವಾರಿ” ಭಜನಾ ಸಂಕೀರ್ತನ ನೆಡೆಯಿತು  .

ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಕೆ ಗೋಕುಲ್ ದಾಸ್ ಪೈ , ವೇ ಮೂ ಚೇಂಪಿ ರಾಮಚಂದ್ರ ಭಟ್ , ಮಂದಿರದ ಅರ್ಚಕರಾದ ಶೈಲೇಶ ಭಟ್, ವಿಶ್ವನಾಥ ಭಟ್, ಸುದೀರ್ ಶೆಣೈ , ಶಾಲಿನಿ ಪೈ , ಜಿ .ಎಸ್.ಬಿ ಸಮಾಜದ ಶ್ರೀ ರಾಮ ಸೇವಾ ಟ್ರಸ್ಟ್ ಸದಸ್ಯರು  ,ಜಿ .ಎಸ್.ಬಿ ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿ  ಸದಸ್ಯರು , ನೂರಾರು ಸಮಾಜ ಬಾಂದವರು ಉಪಸ್ಥಿತರಿದ್ದರು.  

RELATED ARTICLES
- Advertisment -
Google search engine

Most Popular