ಕಿನ್ನಿಗೋಳಿ; ಶ್ರೀ ಸರಳಧೂಮಾವತಿ ದೈವಸ್ಥಾನ ಕಿಲೆಂಜೂರು ಇಲ್ಲಿನ ಶ್ರೀ ಬಂಟ ಧೂಮಾವತಿ ದೈವಗಳ ವಾರ್ಷಿಕ ನೆಮೋತ್ಸವ ಡಿ 11 ರಂದು ಬುಧವಾರ ರಾತ್ರಿ ನಡೆಯಲಿದೆ. ಡಿ 10 ರಂದು ಮಂಗಳವಾರ ಬೆಳಿಗ್ಗೆ 10.30 ಕ್ಕೆ ಪುಣ್ಯಾರ್ಚನೆ, ಶುದ್ದಿಕಲಶ, ರಾತ್ರಿ 7.30 ಕ್ಕೆ ಭಂಡಾರ ಸಾನದಿಂದ ಗರ್ಭಗುಡಿಗೆ ಶ್ರೀ ದೈವಗಳ ಭಂಡಾರ ಆಗಮನ, 8.15 ಕ್ಕೆ ಶ್ರೀ ದೈವಗಳಿಗೆ ಚೌತಿ ಹಬ್ಬ, ಡಿ 11 ರಂದು ಮದ್ಯಾಹ್ನ 12.30ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 8.00 ಕ್ಕೆ, ಗರ್ಭಗುಡಿಯಿಂದ ಕೊಡಿಯಡಿಗೆ ಭಂಡಾರ ಆಗಮನ, ರಾತ್ರಿ 10.00 ರಿಂದ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಅನುಂವಶಿಕ ಆಡಳಿತ ಮುಕ್ತೇಸರ ವಿಶ್ವನಾಥ ಕೆ ಶೆಟ್ಟಿ ಕುಡ್ತಿಮಾರುಗುತ್ತು ತಿಳಿಸಿದ್ದಾರೆ.
ಡಿ.11: ಶ್ರೀ ಸರಳ ಧೂಮಾವತಿ ದೈವಸ್ಥಾನ ಕಿಲೆಂಜೂರು ದೈವಗಳ ವಾರ್ಷಿಕ ನೆಮೋತ್ಸವ
RELATED ARTICLES