ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಇದರ ನೂತನ ದೇವಾಲಯ ಲೋಕಾರ್ಪಣೆ, ಬ್ರಹ್ಮಕಲಶೋತ್ಸವ, ಮತ್ತು ಮೂರನೇ ದಿನದ ಲಕ್ಷ ಮೋದಕ ಹವನ, ಶತಚಂಡಿ ಯಾಗ, 2016 ಕಾಯಿ ಗಣ ಹವನ ಕಾರ್ಯಕ್ರಮದ ಅದ್ದೂರಿ ನೆಡೆಯಿತು.
ಪೂರ್ಣಕುಂಭ ಸ್ವಾಗತದೊಂದಿಗೆ ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಬರಮಾಡಿಕೊಂಡು ಪಾದ ಪೂಜೆ ಸಲ್ಲಿಸಿ ಫಲ ಪುಷ್ಪವನ್ನು ನೀಡಿ ಗೌರವಿಸಲಾಯಿತು. ಶ್ರೀ ದೇವರಿಗೆ ವಿಶೇಷ ಪೂಜೆ ನಡೆಯಿತು. ನಂತರ ಸ್ವಾಮೀಜಿ ಅವರು ಮಾತನಾಡಿ ನಮ್ಮ ಧರ್ಮದಲ್ಲಿ ಒಬ್ಬರ ಮನ ಪರಿವರ್ತನೆ ಮಾಡುವ ಶಕ್ತಿಯಿದೆ ಎನ್ನುವುದು ಕೃಷ್ಣ ಪಂತದಿಂದ ಸಾಬೀತಾಗಿದೆ. ನಮ್ಮ ದೇವಾಲಯಗಳು ಹಿಂದೆ ಅನೇಕ ವಿದ್ವಾಂಸರನ್ನು ಸೃಷ್ಟಿಸುವ ಕೇಂದ್ರಗಳಾಗಿವೆ. ಆದ್ರೆ ಇಂದಿನ ಶಿಕ್ಷಣ ವ್ಯವಸ್ಥೆಯೇ ಬದಲಾಗಿದೆ ಎಂದರು.
ನಮ್ಮ ಕನ್ನಡ ಶಾಲೆಗಳು ಇಂದು ಸಂಸೃತಿಯ ಪ್ರತೀಕವಾಗಿದೆ. ಕನ್ನಡ ಶಾಲೆಗಳನ್ನು ಮುಚ್ಚಿದರೆ ನಮ್ಮ ಸಂಸ್ಕೃತಿಯ ಮೇಲೆ ಭಾರಿ ಪೆಟ್ಟು ಬೀಳುತ್ತದೆ ಎಂದರು.
ಶ್ರೀ ಹರಿನಾರಾಯಣ ಅಸ್ರಣ್ಣ, ಕಟೀಲು, ಅನುವಂಶೀಯ ಅರ್ಚಕರು, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಟೀಲು ಅವರು ಮಾತನಾಡಿ ಸನಾತನ ಧರ್ಮದಲ್ಲಿ ಐದು ವಿಭಾಗ ವಿದ್ದರು ಸಹ ಪ್ರಧಾನ ಪೂಜೆ ವಿನಾಯಕನಿಗೆ. ವಿಘ್ನ ನಿವಾರಣೆಗೂ ಗಣಪತಿಯೇ ಮುಕ್ಯ. ಎಲ್ಲ ಧರ್ಮಕ್ಕಿಂತಲು ನಮ್ಮ ಸನಾತನ ಧರ್ಮ ಶ್ರೇಷ್ಠ. ಬೇರೆ ಬೇರೆ ಧರ್ಮಗಳನ್ನು ನೋಡುವಾಗ ನಮ್ಮ ಧರ್ಮವೇ ಭಾರತದಲ್ಲಿ ಬಹುತ್ವವನ್ನು ಹೊಂದಿದ ಧರ್ಮ. ಆದರೂ ಸಹ ನಮ್ಮ ಧರ್ಮದ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ ವಿಷಾದದ ಸಂಗತಿಯಾಗಿದೆ ಎಂದರು.
ಕರಾವಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಣೇಶ ರಾವ್ ಮಾತನಾಡಿ ನಾವು ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗವನ್ನು ಅನುಸರಿಸಬೇಕಾಗಿದೆ. ನಮ್ಮ ದೇಶದಲ್ಲಿ ಇಂದಿಗೂ ನಮ್ಮಸಂಸ್ಕಾರ, ಸಂಸ್ಕೃತಿ ಉಳಿದಿದೆ ಎಂದರೆ ಅದು ನಮ್ಮಲ್ಲಿಯ ದೇವಸ್ಥಾನಗಳಿಗೆ ನಾವು ಕೊಡುವ ಭಕ್ತಿ ಪೂರ್ವಕವಾದ ನಮನ ಕಾರಣವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ಟ ದೇವಾಲಯದ ಗರ್ಭಗೃಹ ನಿರ್ಮಾಣದ ಕಾರ್ಯ ಪವಾಡ ಸದೃಶವಾಗಿ ನಡೆದು ಬಂದಿರುವುದು ಹಿರಿಯರಾದ ರಾಮಚಂದ್ರ ಭಟ್ಟ, ಎಲ್. ಟಿ. ತಿಮ್ಮಪ್ಪ ಹೆಗಡೆ ಅವರ ಅನುಗ್ರಹದಿಂದ ಹಾಗೂ ಭಕ್ತರ ಸಹಕಾರದಿಂದ ಎಲ್ಲವು ಸಾಧ್ಯವಾಯಿತು ಎಂದರು.
ಧಾರ್ಮಿಕ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನ ಎಲ್. ಟಿ. ತಿಮ್ಮಪ್ಪ ವಹಿಸಿದರು.
ಸಂಜೆ 6ಗಂಟೆಯಿಂದ ದೇವಸ್ಥಾನದಲ್ಲಿ ಅಲೆವೂರು ವಿಠಲ ಭಟ್ ಅವರ ನೇತೃತ್ವದಲ್ಲಿ ಶ್ರೀ ಚಕ್ರ ಪೂಜೆ ನಡೆಯಿತು. ಕುದ್ರೋಳಿ ಗಣೇಶ್ ರವರಿಂದ ಮಾಯಾಲೋಕ ಜಾದೂ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರಿನ ಮೊಕ್ತೇಸರ ಬೀ. ಅಪ್ಪಣ್ಣ ಹೆಗ್ಡೆ, ಶ್ರೀ ಕ್ಷೇತ್ರ ಕಮಲಶಿಲೆಯ ಮೊಕ್ತೇಸರ ಸಚ್ಚಿದಾನಂದ ಚಾತ್ರ ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಟಾನದ ಕಾರ್ಯದರ್ಶಿ ಶರಣ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿವಿನಾಯಕ ಶಾಲೆಯ ಶಿಕ್ಷಕರು ಪ್ರಾರ್ಥಿಸಿದರು. ಮಹೇಶ್ ದೇವಾಡಿಗ ಸ್ವಾಗತಿಸಿದರು. ಶಿಕ್ಷಕ ಮಹಾದೇವ ನಿರ್ವಹಿಸಿದರು. ಗಣೇಶ್ ದೇವಾಡಿಗ ವಂದಿಸಿದರು.