ಕರ್ನಾಟಕ ಸರಕಾರ ದ.ಕ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ನೆಹರು ಯುವ ಕೇಂದ್ರ ಮಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ಘಟಕ,ರೆಡ್ ರಿಬ್ಬನ್ಸ್ ಕ್ಲಬ್ ಗಳು, ಡಿಕ್ಯಾ ಥ್ಲಾನ್ ಭಾರತ್ ಮಾಲ್, ಸ್ಕೂಲ್ ಬುಕ್ ಕಂಪನಿ,ಲಯನ್ಸ್ ಕ್ಲಬ್.ದ.ಕ,ಪ್ರಗತಿ ಸ್ಟಡಿ ಸೆಂಟರ್, ಪುತ್ತೂರು. ಇವರುಗಳ ಸಯುಂಕ್ತ ಆಶ್ರಯದಲ್ಲಿ.
ದ.ಕ.ಜಿಲ್ಲೆಯಲ್ಲಿ ಎಚ್‌ಐವಿ,ಏಡ್ಸ್ ಬಗ್ಗೆ ಅರಿವು ಸೇವಾ ಸೌಲಭ್ಯಗಳ ಮಾಹಿತಿ ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕಾಲೇಜು ವಿದ್ಯಾರ್ಥಿಗಳಿಗಾಗಿ ಸೆ.8ರಂದು ಬೆಳಿಗ್ಗೆ ಘಂಟೆ 6 ಕ್ಕೆ ಮ್ಯಾರಥಾನ್ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಮಂಗಳ ಕ್ರೀಡಾಂಗಣದಿಂದ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಕುದ್ರೋಳಿ ಮಾರ್ಗವಾಗಿ ಹಳೆ ನ್ಯೂಚಿತ್ರ ಚಿತ್ರಮಂದಿರ, ಡೊಂಗರಕೇರಿ,ಪಿ.ವಿ.ಎಸ್ ವೃತ್ತ, ಎಂ.ಜಿ ರೋಡ್ ಮೂಲಕ ಮಹಾನಗರ ಪಾಲಿಕೆ ಮುಂಭಾಗದಿಂದ ಹಾದೂ ಮಂಗಳ ಕ್ರೀಡಾಂಗಣದಲ್ಲಿ ಅಂತ್ಯ ಗೊಳಿಸಲಾಯಿತು.
ಅಭಿಯಾನದಲ್ಲಿ ಹಲವು ಇಲಾಖೆಗಳ ಅಧಿಕಾರಿಗಳು,ಸಂಘ ಸಂಸ್ಥೆಗಳ ಸದಸ್ಯರುಗಳು ಹಾಗೂ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು, ಹಳೆಯಂಗಡಿ ಇದರ ಅಧ್ಯಕ್ಷರಾದ ದೀಪಕ್ ಸುವರ್ಣ, ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಸದಸ್ಯರಾದ ಧರ್ಮನಂದ ಶೆಟ್ಟಿಗಾರ್, ಗೌತಮ್ ಬೆಲ್ಚಡ, ರಮೇಶ್ ಕರ್ಕೇರ, ಅರ್ಫಾಜ್, ಪಾಂಡುರಂಗ, ನೀರಜ್ ಕಿರೋಡಿಯನ್, ಕಲ್ಪೇಶ್, ಕುಮಾರ್ ನಿಹಾಲ್, ಕುಮಾರ್ ವೈಭವ್, ಕುಮಾರ್ ಶ್ರವಣ್ ಮತ್ತು ಕುಮಾರ್ ಆದಿತ್ಯ ಪಾಲ್ಗೊಂಡಿದ್ದರು.