
ತೋಕೂರು : ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಹಳೆಯಂಗಡಿ ಇಲ್ಲಿ ವರ್ಷಂಪ್ರತಿ ಜರಗುವ ಸಾಮೂಹಿಕ ಆಶ್ಲೇಷಾ ಬಲಿ ಪೂಜೆಯು ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಿತು.

ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕರಾದ ಶ್ರೀ ಟಿ ಕೆ ಮಧುಸೂದನ ಆಚಾರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿ, ಸಮಿತಿ ಸದಸ್ಯರಾದ ಸಂಪತ್ ಜೆ ಶೆಟ್ಟಿ ತೋಕೂರುಗುತ್ತು, ಪುರುಷೋತ್ತಮ ಕೋಟ್ಯಾನ್, ಸವಿತಾ ಶರತ್, ಅಶೋಕ್ ಕುಂದರ್ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಹರಿದಾಸ್ ಭಟ್, ಟಿ ಪುರುಷೋತ್ತಮ ರಾವ್, ಮೋಹನದಾಸ್, ಊರ ಪರವೂರ ಗ್ರಾಮಸ್ಥರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.