Sunday, July 14, 2024
Homeಸಿನಿಮಾಇನ್ನಷ್ಟು ಎತ್ತರಕ್ಕೆ ಏರುತ್ತೀಯಾ…: ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿಗೆ ದೈವದ ಅಭಯ

ಇನ್ನಷ್ಟು ಎತ್ತರಕ್ಕೆ ಏರುತ್ತೀಯಾ…: ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿಗೆ ದೈವದ ಅಭಯ

ಮಂಗಳೂರು: ಕೆಜಿಎಫ್ ಚಿತ್ರದ ನಾಯಕಿ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಕುಟುಂಬದ ದೈವಗಳಿಗೆ ಹರಕೆ ಕೋಲ ನೇರವೇರಿಸಿದ್ದಾರೆ. ಈ ವೇಳೆ ಮತ್ತಷ್ಟು ಎತ್ತರಕ್ಕೆ ಏರುತ್ತೀಯಾ ಎಂದು ಶ್ರೀನಿಧಿ ಶೆಟ್ಟಿಗೆ ದೈವ ಅಭಯ ನೀಡಿದೆ.

ನಗರದ ಹೊರವಲಯದ ಕಿನ್ನಿಗೋಳಿಯಲ್ಲಿರುವ ತಮ್ಮ ಕುಟುಂಬದ ಮನೆ ತಾಳಿಪಾಡಿ ಗುತ್ತುವಿನಲ್ಲಿ ಈ ಹರಕೆ ಅವರು ನೆರವೇರಿಸಿದ್ದಾರೆ. ತನ್ನ ಇಷ್ಟಾರ್ಥ ಸಿದ್ಧಿಗಾಗಿ ಶ್ರೀನಿಧಿ ಶೆಟ್ಟಿ ಹರಕೆ ಹೊತ್ತಿದ್ದರಂತೆ. ಆ ಪ್ರಕಾರ ಗುತ್ತು ಮನೆಯಲ್ಲಿ ಜಾರಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು.

ಈ ವೇಳೆ ಶ್ರೀನಿಧಿ ಶೆಟ್ಟಿಯವರ ಕುಟುಂಬ ವರ್ಗದವರು, ಸಂಬಂಧಿಕರು ಉಪಸ್ಥಿತರಿದ್ದರು. ಕನ್ನಡದ ಕೆಜಿಎಫ್ 1, ಕೆಜಿಎಫ್ 2 ಸಿನಿಮಾಗಳಲ್ಲಿ ಯಶ್ ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದರು. ಬಳಿಕ ಸೌತ್ ಸಿನೆಮಾಗಳಲ್ಲಿ ಶ್ರೀನಿಧಿ ಶೆಟ್ಟಿ ಹೆಸರು ಮಾಡಿದ್ದಾರೆ. ಇದೀಗ ಕಿಚ್ಚ ಸುದೀಪ್ ಅವರ ಚಿತ್ರವೊಂದರಲ್ಲೂ ಅವರು ನಟಿಸಲಿದ್ದಾರೆ ಎಂಬ ಮಾಹಿತಿಯಿದೆ.  

RELATED ARTICLES
- Advertisment -
Google search engine

Most Popular