ಶಿರ್ಲಾಲು: ಶಿರ್ಲಾಲು, ನಲ್ಲಾರು, ಕರಂಬಾರು ಗ್ರಾಮಗಳ ಕೂಡುವಿಕೆಯಿಂದ ಶ್ರೀ ಬ್ರಹ್ಮಬೈದರ್ಕಳ ಗರಡಿ, ಬಂತಡ್ಕ ಶಿರ್ಲಾಲಿನಲ್ಲಿ ಜ. 4ರಿಂದ ಜ. 6ರವರೆಗೆ ದೈವ ಕೊಡಮಣಿತ್ತಾಯ ಮತ್ತು ಶ್ರೀ ಬೈದರ್ಕಳ ಜಾತ್ರೆ ಜರುಗಲಿದೆ.
ಜ.4ರಂದು ರಾತ್ರಿ ಮಹಮ್ಮಾಯಿ ಪೂಜೆ ನಡೆಯಲಿದ್ದು, ಜ.5ರಂದು ರಾತ್ರಿ ಕರ್ದೊಟ್ಟುವಿನಿಂದ ದೈವದ ಭಂಡಾರ ಬರುವುದು, ಕೃಂಬಾರು ಗ್ರಾಮದ ಕಲ್ಲಾಜೆಯಿಂದ ಕೊಡಮಣಿತ್ತಾಯ ಭಂಡಾರ ಬರುವುದು, ನಲ್ಲಾರಿನಿಂದ ಬೈದರ್ಕಳ ಭಂಡಾರ ಬರುವುದು. ರಾತ್ರಿ 7.30ರಿಂದ ಅನ್ನಸಂತರ್ಪನೆ ಹಾಗೂ ಸಂದೇಶ್ ಮರೋಳಿ ಅರ್ಪಿಸುವ ಧ್ವನಿ ಮೆಲೋಡೀಸ್ ತಂಡದಿಂದ ಮಂಗಳೂರಿನ ಖ್ಯಾತ ಕಲಾವಿದರ ಸಮಾಗಮದೊಂದಿಗೆ ಸಂಗೀತ ರಸಮಂಜರಿ ನಡೆಯಲಿದೆ. ಜ. 6ರಂದು ರಾತ್ರಿ 7 ಗಂಟೆಗೆ ಕಾಪಿಕಾಡ್-ವಾಮಂಜೂರು-ಸಾಯಿ ಅಭಿನಯದ 59ನೇ ವಿನೂತನ ಶೈಲಿಯ ಏರ್ಲಾ ಗ್ಯಾರಂಟಿ ಅತ್ತ್ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.