Tuesday, April 29, 2025
HomeUncategorizedಶ್ರೀ ಬ್ರ‌ಹ್ಮ‌ಬೈದೇರುಗ‌ಳ‌ ಗ‌ರೋಡಿ ಕ‌ಲ್ಮಾಡಿ : ಸಾಧಕರಿಗೆ ಸನ್ಮಾನ

ಶ್ರೀ ಬ್ರ‌ಹ್ಮ‌ಬೈದೇರುಗ‌ಳ‌ ಗ‌ರೋಡಿ ಕ‌ಲ್ಮಾಡಿ : ಸಾಧಕರಿಗೆ ಸನ್ಮಾನ

ಶ್ರೀ ಬ್ರ‌ಹ್ಮ‌ಬೈದೇರುಗ‌ಳ‌ ಗ‌ರೋಡಿ ಕ‌ಲ್ಮಾಡಿ(ರಿ.) ಇದರ ಕೂಡುಕಟ್ಟಿನ ವ್ಯಾಪ್ತಿಯಲ್ಲಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅವ್ನಿ ಗಣೇಶ್ ಬಗ್ಗುಮುಂಡ (ಕ್ರೀಡಾ ಕ್ಷೇತ್ರ), ಕಾರ್ತಿಕ್ ಪೂಜಾರಿ ಬಂಕೇರಕಟ್ಟ ಅಂಬಲಪಾಡಿ (ಪವರ್ ಲಿಫ್ಟಿಂಗ್), ಮಾನ್ಸಿ ಜೆ. ಸುವರ್ಣ ಮಲ್ಪೆ (ಬಾಕ್ಸಿಂಗ್), ಡಾ! ಪೂಜಾ ಗೋಪಾಲ ಪೂಜಾರಿ ಪಡ್ಲ ನೆರ್ಗಿ ಕೊಡವೂರು (ಸಂಶೋಧನೆ) ಮತ್ತು ಛಾಯಾ ಎಸ್. ಪೂಜಾರಿ ಬಾಪುತೋಟ (ಕರಾಟೆ) ಇವರಿಗೆ ಗರೋಡಿಯ ಆಡ‌ಳಿತ‌ ಸ‌ಮಿತಿಯ ವತಿಯಿಂದ ಸಂಕ್ರಮಣ ದಿನದ ವಿಶೇಷ ಪೂಜೆಯ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಶ್ರೀ ಬ್ರಹ್ಮಬೈದೇರುಗಳ ಗಂಧ ಪ್ರಸಾದವನ್ನು ನೀಡಿ, ಶಾಲು ಹೊದೆಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗರೋಡಿಯ ಆಡಳಿತ ಸಮಿತಿಯ ಗೌರವಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ, ಅಧ್ಯಕ್ಷ ಶಶಿಧರ ಎಮ್. ಅಮೀನ್ ವಡಬಾoಡೇಶ್ವರ, ಮಾಜಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಪ್ರಧಾನ ಕಾರ್ಯದರ್ಶಿ ಮನೋಹರ್ ಜತ್ತನ್ ಮಲ್ಪೆ, ಜತೆ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜತೆ ಕೋಶಾಧಿಕಾರಿ ಜಯಕರ ಪೂಜಾರಿ ಕೊಡವೂರು, ಸಂಘಟನಾ ಕಾರ್ಯದರ್ಶಿ ಮಧ್ವನಗರ ಶಂಕರ ಪೂಜಾರಿ, ಆಡಳಿತ ಸಮಿತಿ ಸದಸ್ಯರಾದ ಕಲ್ಮಾಡಿ ಶೇಖರ ಪೂಜಾರಿ, ಬಾಲಕೃಷ್ಣ ಕೊಡವೂರು, ವಿನಯ ಕುಮಾರ್ ಪಡುಕರೆ, ಸತೀಶ್ ಬಂಗೇರ ಮಲ್ಪೆ, ಜಗದೀಶ್ ಬಂಗೇರ ಮಲ್ಪೆ, ಲಕ್ಷ್ಮಣ ಪೂಜಾರಿ ಅಂಬಲಪಾಡಿ, ಗರೋಡಿ ಮನೆ ನಾರಾಯಣ ಪೂಜಾರಿ, ಅರ್ಚಕ ವರ್ಗ, ಕೂಡುಕಟ್ಟಿನ ಗುರಿಕಾರರು ಮತ್ತು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular