Sunday, July 14, 2024
Homeಕ್ರೀಡೆಶ್ರೀ ದುರ್ಗಾಪರಮೇಶ್ವರಿ ಮಿತ್ರ ಮಂಡಳಿ ಮತ್ತು ಧನುಷ್ ಚಾರ್ಟೇಬಲ್ ಟ್ರಸ್ಟ್: 5ನೇ ವರ್ಷದ ಹೇರಂಜಾಲು ಮ್ಯಾರಥಾನ್...

ಶ್ರೀ ದುರ್ಗಾಪರಮೇಶ್ವರಿ ಮಿತ್ರ ಮಂಡಳಿ ಮತ್ತು ಧನುಷ್ ಚಾರ್ಟೇಬಲ್ ಟ್ರಸ್ಟ್: 5ನೇ ವರ್ಷದ ಹೇರಂಜಾಲು ಮ್ಯಾರಥಾನ್ 2024

ಶ್ರೀ ದುರ್ಗಾಪರಮೇಶ್ವರಿ ಮಿತ್ರ ಮಂಡಳಿ ಮತ್ತು ಧನುಷ್ ಚಾರ್ಟೇಬಲ್ ಟ್ರಸ್ಟ್ ನ ವತಿಯಿಂದ 5ನೇ ವರ್ಷದ ಹೇರಂಜಾಲು ಮ್ಯಾರಥಾನ್ 2024 ಕ್ರೀಡಾಕೂಟ ಅದ್ದೂರಿ ಯಾತ್ರೆ ವಿಜಯವಾಗಿ ನಡೆಯಿತು.

ವಿಶೇಷ ಚೇತನ ಹೆಣ್ಣು ಮಕ್ಕಳ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರ್ತಿ ಸ್ರಜನಾ ಎಸ್ ಪೂಜಾರಿಯು ಮ್ಯಾರಥಾನ್ ಉದ್ಘಾಟನೆಗೆ ಚಾಲನೆ ನೀಡಿದರು.

ರಾಜ್ಯದ ವಿವಿಧ ಭಾಗಗಳಿಂದ 400 ಕ್ಕೂ ಹೆಚ್ಚು ಸ್ಪರ್ದಾತ್ಮಕವಾದ ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದು, ಅಂತಾರಾಷ್ಟ್ರೀಯ ಮಟ್ಟದ ಅತ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ವರ್ಷ ಹಲವಾರು ಗ್ರಾಮೀಣ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗಳಾಗಿದ್ದರು.

ಕ್ರಷ್ಣ ಪೂಜಾರಿ ಅಧ್ಯಕ್ಷರು ಶ್ರೀ ದುರ್ಗಾಪರಮೇಶ್ವರಿ ಮಿತ್ರ ಮಂಡಳಿ & ಧನುಷ್ ಚಾರಿಟೇಬಲ್ ಟ್ರಸ್ಟ್ ನಲ್ಲಿ ಹೇರಂಜಾಲುವಿನ ಸಮಾರಂಭದಲ್ಲಿ ಮಾತನಾಡಿದರು. ಅವರು ಮ್ಯಾರಥಾನ್‌ ಓಟಕ್ಕೆ ಸಾಕಷ್ಟು ತರಬೇತಿ ಬೇಕು ಎಂದು ಹೇಳಿದರು. ಯಶಸ್ವಿ ಮ್ಯಾರಥಾನ್‌ ತರಬೇತಿಯ ಪ್ರಮುಖ ಅಂಶವೆಂದರೆ ದೀರ್ಘಕಾಲದವರೆಗೆ ಓಡಲು ಸಾಧ್ಯವಾಗುವಂತೆ ಪ್ರತಿ ವಾರ ಸೂಕ್ತ ತರಬೇತಿ ಪಡೆಯಬೇಕು ಎಂದು ಹೇಳಿದರು. ಇದರಿಂದ ನಿಮ್ಮ ಮಾಂಸಖಂಡ, ಕೀಲು, ಎಲುಬು, ಹೃದಯ, ಶ್ವಾಸಕೋಶ ಹಾಗೂ ಮಿದುಳು ಒಂದೇ ದಿನದಲ್ಲಿ 21 ಕಿಲೋಮೀಟರ್‌ ಓಟಕ್‌ಗೆ ಸಜ್ಜಾಗಲು ನೆರವಾಗುತ್ತದೆ ಎಂದರು.

ಹಿರಿಯರಾದ ಎಚ್ ವಿಜಯ ಕುಮಾರ ಶೆಟ್ಟಿ ಸ್ಪೂರ್ತಿ ಜನರಲ್‌ ಸ್ಟೋರ್‌ ಕಂಬದಕೊಣೆಗಾರರಾಗಿ ಮಾತನಾಡಿ, ಭಗವಂತನ ಅನುಗ್ರಹದಿಂದ ಎಲ್ಲ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆದಿವೆ ಎಂದು ಸಂಘದ ಸದಸ್ಯರಿಗೆ ಅಭಿನಂದಿಸಿದರು.

ವೇದನಾಥ ಹೇರಂಜಾಲು ಅಧ್ಯಕ್ಷರು ಶಿವಾಜಿ ಬಳಗ ಹೇರಂಜಾಲು ಮಾತನಾಡಿ ಸಾಮಾಜಿಕ ಉದ್ದೇಶಗಳಾದ ಪ್ಲಾಸ್ಟಿಕ್ ಮುಕ್ತ ಗ್ರಾಮ, ನೀರಿನ ಮಿತವಾದ ಬಳಕೆ ಬಗ್ಗೆ ಜಾಗ್ರತೆ ಮೂಡಿಸಲಾಯಿತು ಎಂದು ಹೇಳಿದರು.

ಕ್ರತಿಕಾ ಗಾಣಿಗ ಅಧ್ಯಕ್ಷರು ಮ್ಯಾರಥಾನ್ ಕಮಿಟಿ ಅವರು ಮಾತನಾಡಿದರು. 5ನೇ ವರ್ಷದ ಮ್ಯಾರಥಾನ್ ಓಟದಲ್ಲಿ ಹಲವಾರು ವಿದ್ಯಾರ್ಥಿಗಳು ಮತ್ತು ಹಲವಾರು ಹಿರಿಯ ನಾಗರಿಕರು ಭಾಗವಹಿಸಿ ಯಶಸ್ವಿಗಳಾದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾಲಿಂಗ ಪೂಜಾರಿ ಅಪ್ಪೇಡಿ ಮನೆ, ರಘು ಪೂಜಾರಿ ಸುಕ್ರಾಸನ ಮನೆ, ಸುಬ್ಬಣ್ಣ ಪೂಜಾರಿ ಹಿತ್ಲುಮನೆ, ಅನುಸೂಯ ಮಯ್ಯ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಆಚಾರ್ಯ ಬಲಾಡಿ ಮನೆಯನ್ನು ಸ್ವಾಗತಿಸಿ, ಮಣಿರಾಜ ಹೇರಂಜಾಲು ವಂದಿಸಿದರು.

RELATED ARTICLES
- Advertisment -
Google search engine

Most Popular