ಬೈಂದೂರು ತಾಲೂಕಿನ ನಾಡ ಗ್ರಾಮದ ಕೋಣ್ಕಿ ನಿವಾಸಿ ಚಂದ್ರಕಾಂತಿ ಮತ್ತು ಸುಧಾಕರ ಶೆಟ್ಟಿ ನೇತೃತ್ವದಲ್ಲಿ ಶ್ರೀ ಗಿರಿಜಾ ಶಂಕರ ಕಲ್ಯಾಣೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಡಿಕೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಸೋಮವಾರ ಅದ್ದೂರಿಯಾಗಿ ನಡೆಯಿತು.
ಶ್ರೀದೇವರ ಮೂರ್ತಿಯನ್ನು ಕೋಣ್ಕಿ ಮಹಾವಿಷ್ಣು ದೇವಸ್ಥಾನದಿಂದ ಕಡಿಕೆ ಶ್ರೀಉಮಾಮಹೇಶ್ವರ ದೇವಸ್ಥಾನದ ವರೆಗೆ ಭವ್ಯ ಮೆರವಣಿ ಮೂಲಕ ಪೂರ್ಣಕುಂಭ ಕಳಶ,ಚೆಂಡೆವಾದನದೊಂದಿಗೆ ಬರಮಾಡಿಕೊಳ್ಳಲಾಯಿತು.
ಶ್ರೀ ಗಿರಿಜಾ ಶಂಕರ ಕಲ್ಯಾಣೋತ್ಸವ ಕಾರ್ಯಕ್ರಮದ ಅಂಗವಾಗಿ ಶತರುದ್ರಾಭೀಷೇಕ, ಮಹಾಮಂಗಳಾರತಿ, ಅನ್ನಸಂತರ್ಪಣೆ,ಭಜನಾ ಕಾರ್ಯಕ್ರಮ,ಶೋಭಾನೆ ಹಾಡು,ಗಾನಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಸಾರಥ್ಯದಲ್ಲಿ ದಕ್ಷಧ್ವರ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರುಗಿತು.ಸಂಜೆ ಶ್ರೀದೇವರ ಶಯನೋತ್ಸವ ಕಾರ್ಯಕ್ರಮ ನಡೆಯಿತು.
ನಿತೀಶ್ ಶೆಟ್ಟಿ ಜಡ್ಡಾಡಿ ಮಾತನಾಡಿ,ಪರಮಾತ್ಮನಾದ ಶ್ರೀಶಂಕರ ಮತ್ತು ಗಿರಿಜಾ ದೇವಿಯ ಕಲ್ಯಾಣವನ್ನು ನೋಡುವ ಸೌಭಾಗ್ಯ ನಮಗೆ ದೊರೆತ್ತಿರುವುದು ನಮ್ಮ ಪೂರ್ವ ಜನ್ಮದ ಪುಣ್ಯದ ಫಲವಾಗಿದೆ.ಇವೊಂದು ದೇವತಾ ಕಾರ್ಯ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಗ್ರಾಮಸ್ಥರಿಗೆ ಕುಟುಂಬದವರ ಪರವಾಗಿ ಧನ್ಯವಾದವನ್ನು ಅರ್ಪಿಸಿದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಚಂದ್ರಕಾಂತಿ ಮತ್ತು ಸುಧಾಕರ ಶಟ್ಟಿ ಕುಟುಂಬಸ್ಥರು ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ ಮೂಲಕ ಶ್ರೀದೇವರ ಜಲಸ್ತಂಭನ ಕಾರ್ಯ ಸೌಪರ್ಣಿಕಾ ನದಿಯಲ್ಲಿ ಮಂಗಳವಾರ ಸಂಜೆ ನಡೆಯಲಿದೆ.ಆ ಪ್ರಯುಕ್ತ ರುದ್ರಹೋಮ,ಪ್ರಸಾದ ವಿತರಣೆ,ಭಜನಾ ಕಾರ್ಯಕ್ರಮ ಜರುಗಲಿದೆ.