ಶ್ರೀ ಕ್ಷೇತ್ರ ಉಚ್ಚಿಲ:ಮುಷ್ಠಿ ಅಕ್ಕಿ ಕಾಣಿಕೆ ಸೇವೆಗೆ ಚಾಲನೆ

0
89

ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ನಡೆಯುತ್ತಿರುವ ನಿತ್ಯ ಅನ್ನದಾನ ಸೇವೆ ನಿರಂತರವಾಗಿ ನಡೆಯಬೇಕೆನ್ನುವ ಸದುದ್ದೇಶದಿಂದ, ಆ ಸೇವೆಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸುವ “ಮುಷ್ಠಿ ಅಕ್ಕಿ ಕಾಣಿಕೆ ಸೇವೆ”ಗೆ ತುಲಾ ಸಂಕ್ರಮಣದ ಶುಭ ದಿನವಾದ ಇಂದು (17.10.2025, ಶುಕ್ರವಾರ) ನಾಡೋಜ ಡಾ. ಜಿ. ಶಂಕರ್ ರವರು ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ರಾಘವೇಂದ್ರ ಉಪಾಧ್ಯಾಯ, ಗಿರಿಧರ್ ಸುವರ್ಣ, ವಿನಯ್ ಕರ್ಕೇರ, ರತ್ನಾಕರ್ ಸಾಲ್ಯಾನ್, ಗುಂಡು ಬಿ. ಅಮೀನ್, ದಿನೇಶ್ ಎರ್ಮಾಳ್, ಶ್ರೀಪತಿ ಭಟ್, ನಾರಾಯಣ ಸಿ. ಕರ್ಕೇರ, ಶಿವಕುಮಾರ್ ಮೆಂಡನ್, ಭರತ್ ಎರ್ಮಾಳ್, ವಿನೋದ್ ಕೋಟ್ಯಾನ್, ಜ್ಞಾನೇಶ್ವರ್ ಕೋಟ್ಯಾನ್, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here