Wednesday, February 19, 2025
Homeಉಡುಪಿಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ರಜತ ಮಹೋತ್ಸವ  125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ...

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ರಜತ ಮಹೋತ್ಸವ  125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವ

ಉಡುಪಿ :ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ  ತೆಂಕಪೇಟೆ ಉಡುಪಿ ಶತಮಾನೋತ್ತರ ರಜತ ಮಹೋತ್ಸವ  125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವ ಶ್ರೀ  ಪುರಂದರ ಜಯಂತಿ  ಆರಾಧನೆಯ ಪರ್ವಕಾಲದಲ್ಲಿ ಇಂದು ಪೂಜ್ಯಶ್ರೀ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ದೇವಳಕ್ಕೆ  ಭೇಟಿ ನೀಡಿದರು .                                            ಉಡುಪಿ ದೇವಳದ  ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿ ವತಿಯಿಂದ ನಿರ್ಮಿಸಲಾದ “ಬೆಳ್ಳಿಯ ಶೇಷ ವಾಹನ ಸಮರ್ಪಣೆ  ” ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಪರಮ ಪೂಜ್ಯ ಗುರುವರ್ಯ ಶ್ರೀ ಮದ್ ಸoಯಮೀoದ್ರ ತೀರ್ಥ ಸ್ವಾಮಿಜಿಯವರು ಅಮೃತ ಹಸ್ತದಿಂದ ಉದ್ಘಾಟನೆ ಮಾಡಿ ಶುಭ ಹಾರೈಸಿದರು. 

ಸಮಾರಂಭದಲ್ಲಿ  ವೇದ ಮೂರ್ತಿ  ಶ್ರೀಕಾಂತ್ ಭಟ್,ದೇವಳದ ಪ್ರಧಾನ ಅರ್ಚಕರಾದ  ದಯಘಾನ್ ಭಟ್  , ದೇವಳದ ಮುಕ್ತೇಸರ ಪಿ ವಿ ಶೆಣೈ , ವಿಶ್ವನಾಥ್ ಭಟ್,  ವಸಂತ್ ಕಿಣೆ , ಚೇ೦ಪಿ ರಾಮಚಂದ್ರ ಭಟ್,  ದೀಪಕ್ ಭಟ್, ಗಿರೀಶ್ ಭಟ್, ದೇವಳದ ಆಡಳಿತ ಮಂಡಳಿಯ ಸದಸ್ಯರು , ವಿವಿಧ ಭಜನಾ ಮಂಡಳಿಯ ಸದಸ್ಯರು  ಜಿ ಎಸ್  ಬಿ  ಮಹಿಳಾ  ಮಂಡಳಿ ಸದಸ್ಯರು, ಯುವಕ ಮಂಡಳಿಯ ಸದಸ್ಯರು ನೂರಾರು  ಸಮಾಜಭಾಂದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular