Monday, July 15, 2024
Homeತುಳುನಾಡುಶ್ಯಾನುಭಾಗ ಕುಟುಂಬಿಕರ ಮೂಲ ಶ್ರೀ ನಾಗ ಸನ್ನಿಧಿಯಲ್ಲಿ ಶ್ರೀ ನಾಗದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಸಂಪನ್ನ

ಶ್ಯಾನುಭಾಗ ಕುಟುಂಬಿಕರ ಮೂಲ ಶ್ರೀ ನಾಗ ಸನ್ನಿಧಿಯಲ್ಲಿ ಶ್ರೀ ನಾಗದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಸಂಪನ್ನ

ಕುಂದಾಪುರ ಚರ್ಚ್‌ ರಸ್ತೆಯ ಪಾದ್ರಿಗುಡ್ಡೆ ಶ್ಯಾನುಭಾಗ ಕುಟುಂಬಿಕರ ಮೂಲ ಶ್ರೀ ನಾಗಸನ್ನಿಧಿಯಲ್ಲಿ ಶ್ರೀ ನಾಗದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ನಾಗಯಕ್ಷೀ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ  ಪ್ರತಿಷ್ಠೆ ಮಂಗಳವಾರ ಸ್ವಂಪನ್ನಗೊಂಡಿತು. ಧಾರ್ಮಿಕ ಪೂಜಾ ವಿಧಿ-ವಿಧಾನಗಳು ವೇದಮೂರ್ತಿ ರವೀಂದ್ರ ಆಚಾರ್ಯ ನಯಂಪಳ್ಳಿ ನೇತೃತ್ವದಲ್ಲಿ ನಡೆಯಿತು. ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಭಜನಾ ಕಾರ್ಯಕ್ರಮ ಜರಗಿತು. ಮಧ್ಯಾಹ್ನ ಆಶ್ಲೇಷಾ ಬಲಿಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.                                ಶ್ರೀ ಸಂಸ್ಥಾನ ಗೋಕರ್ಣ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮಿಜೀಯವರು ಶ್ರೀ ನಾಗಸನ್ನಿಧಿಗೆ  ಭೇಟಿಯಾದರು ಸ್ವಾಮೀಜಿಯವರನ್ನು ಪೂರ್ಣಕುಂಭ ಮಂಗಳವಾದ್ಯದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡು ಶ್ರೀ ಪಾದರ ಪಾದ ಪೂಜೆ ನೆರವೇರಿಸಿ ಗುರುಕಾಣಿಕೆ ಸಲ್ಲಿಸಲಾಯಿತು. ಬಹಳ ಹಿಂದಿನ ಕಾಲದಿಂದಲೂ ಶ್ಯಾನುಭಾಗ ಕುಟುಂಬಿಕರ ಮೂಲ ಸನ್ನಿಧಿಯ ಜೊತೆ ಪರಿಸರದ ಹಲವಾರು ಕುಟುಂಬದ ಭಕ್ತರೂ ನಂಬಿಕೊಂಡು ಬಂದಿರುವ ಕಾರ್ಣಿಕದ ಕ್ಷೇತ್ರವಾಗಿ ಬೆಳೆಯಲು ಮುಖ್ಯ ಕಾರಣ ಭಕ್ತ ಜನರ ಅಚಲವಾದ ನಂಬಿಕೆ ಭಕ್ತಿಯಿಂದ ಮಾಡುವ ಸೇವೆ ಹಾಗೂ ಬೇಡಿದನ್ನು ನೀಡುವ ಶ್ರೀ ದೇವರ ಅಭಯ ಪ್ರಸಾದವೇ ಸಾಕ್ಷಿ ಎಂದು ಅನುಗ್ರಹಸಿದರು.                                                                                                                     ಸಮಾರಂಭದಲ್ಲಿ ಚಂದ್ರಕಾಂತ್ ಶ್ಯಾನುಭಾಗ ರಾಮದಾಸ್ ಶೆಣೈ ಅರ್ಚಕರಾದ ಚೇಂಪಿ ರಮೇಶ ಭಟ್, ಪ್ರದೀಪ್ ಭಟ್, ಗಣೇಶ್ ಭಟ್ ಕಲ್ಯಾಣಪುರ, ಮಂಜುನಾಥ ಆಚಾರ್ಯ ಉಡುಪಿ, ನೂರಾರು ಭಕ್ತರೂ ಉಪಸ್ಥರಿದ್ದರು.     

RELATED ARTICLES
- Advertisment -
Google search engine

Most Popular