ಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ ಇದರ ರಜತ ಮೊಹೋತ್ಸವ ಆಚರಣೆ ಹಾಗೂ ಕಾರ್ತೀಕ ಮಾಸದ ಅಂಗವಾಗಿ ನ . 29 ಶುಕ್ರವಾರ ರಾತ್ರಿ , ಜಿ ಎಸ್ ಬಿ ಮಹಿಳಾ ಮಂಡಳಿವತಿಯಿಂದ ದುರ್ಗಾ ನಮಸ್ಕಾರ ನಡೆಯಿತು. ರಾಮಮಂದಿರದ ಪ್ರಧಾನ ಅರ್ಚಕರಾದ ವೇ . ಮೂ . ಶೈಲೇಶ್ ಭಟ್ ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ಶ್ರೀ ದೇವರಿಗೆ ವಿಶೇಷ ಅಲಂಕಾರ ,ಕುಂಕುಮ ಅರ್ಚನೆ , ಸಾಮೂಹಿಕ ನಮಸ್ಕಾರ , ಮಹಿಳಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
. ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ , ರಾಮಾಂಜನೇಯ ಸೇವಾ ಟ್ರಸ್ಟಿನ ಉಪಾಧ್ಯಕ್ಷರಾದ ವಿಶ್ವನಾಥ್ ಭಟ್, ಸೇವಾದಾರ ಎಂ ವಾಮನ ಭಟ್ ದಂಪತಿಗಳು ಸಹಕರಸಿದರು , ಜಿ ಎಸ್ ಬಿ ಮಹಿಳಾ ಮಂಡಳಿ ಅಧ್ಯಕ್ಷರಾದ ಶಾಲಿನಿ ಪೈ, ಸುದೀರ್ ಶೆಣೈ , ಅನಿಲ್ ಕಾಮತ್ , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು, ಯುವಕ ಮಂಡಳಿಯ ಸದಸ್ಯರು ಸಹಕರಿಸಿದರು , ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.