Monday, July 15, 2024
Homeಮಂಗಳೂರುಲವ್ ಜಿಹಾದ್ ತಡೆಗೆ ಶ್ರೀರಾಮ ಸೇನೆಯಿಂದ ಸಹಾಯವಾಣಿ: ರಾಜ್ಯದ 6 ಕಡೆಯಿಂದ ಕಾರ್ಯಾಚರಣೆ

ಲವ್ ಜಿಹಾದ್ ತಡೆಗೆ ಶ್ರೀರಾಮ ಸೇನೆಯಿಂದ ಸಹಾಯವಾಣಿ: ರಾಜ್ಯದ 6 ಕಡೆಯಿಂದ ಕಾರ್ಯಾಚರಣೆ

ಮಂಗಳೂರು: ಪ್ರೀತಿಯ ನೆಪದಲ್ಲಿ ಹಿಂದೂ ಯುವತಿಯರನ್ನು ವಂಚಿಸುವ ಲವ್ ಜಿಹಾದ್ ಸಂಚನ್ನು ವಿಫಲಗೊಳಿಸಲು ಶ್ರೀರಾಮ ಸೇನೆ ವತಿಯಿಂದ ಸಹಾಯವಾಣಿ ತೆರೆಯಲು ನಿರ್ಧರಿಸಲಾಗಿದೆ. ಲವ್ ಜಿಹಾದ್ ಪ್ರಕರಣದಿಂದ ಮುಕ್ತರಾಗಲು ಸಹಾಯ ಯಾಚಿಸಲು ಸಹಾಯವಾಣಿಗೆ ಕರೆ ಮಾಡುವವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ. ಸಂತ್ರಸ್ತರ ಮನೆಗೆ ತೆರಳಿ ಸಹಕಾರ ನೀಡಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.

ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಕಲ್ಬುರ್ಗಿ ಮತ್ತು ದಾವಣಗೆರೆಯನ್ನು ಕೇಂದ್ರವಾಗಿರಿಸಿ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಲವ್ ಜಿಹಾದ್ ಸಂಬಂಧಿ ದೂರುಗಳನ್ನು ಇವು ನಿರ್ವಹಿಸಲಿವೆ ಎಂದು ತಿಳಿದುಬಂದಿದೆ.

ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲಾಗುತ್ತದೆ. ಆಯಾ ಜಿಲ್ಲೆಗಳಲ್ಲಿ ವಕೀಲರು, ಕೌನ್ಸೆಲಿಂಗ್ ತಜ್ಞರು, ನಿವೃತ್ತ ಪೊಲೀಸ್ ಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸಲಿದೆ.

ಈಗಾಗಲೇ ಕೆಲವು ದೂರುಗಳು ಬಂದಿದ್ದು, ಅವುಗಳನ್ನು ಪರಿಹರಿಸಿಕೊಡಲಾಗಿದೆ. ಸಹಾಯವಾಣಿಯ ಸಂಖ್ಯೆ ಶೀಘ್ರದಲ್ಲೇ ಬಹಿರಂಗಪಡಿಸಲಾಗುತ್ತದೆ ಎಂದು ರಾಮಸೇನೆಯ ಮುಖಂಡರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular