ಮಂಗಳೂರು: ಶ್ರೀ ಶಿರಿಡಿ ಸಾಯಿ ಫ್ರೆಂಡ್ಸ್ ಪುಚ್ಚಾಡಿ ಸೂರಿಂಜೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಆದಿತ್ಯವಾರ ನಡೆಯಿತು. ಗೌರವ ಅಧ್ಯಕ್ಷರಾಗಿ ಶಂಕರ್ ಶೆಟ್ಟಿ ಅಡುಮನೆ ಶಿಬರೂರು ಹಾಗೂ ಗಣನಾಥ್ ಶೆಟ್ಟಿ ನುರ್ಗೆದಡಿ ಸೂರಿಂಜೆ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪುನೀತ್ ಕುಮಾರ್, ಉಪಾಧ್ಯಕ್ಷರಾಗಿ ಅಭಿಷೇಕ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಅರ್ಜುನ್ ಕುಂದರ್ ಮತ್ತು ಲೋಹಿತ್ ಸಾಲಿಯಾನ್, ಕೋಶಾಧಿಕಾರಿಯಾಗಿ ಪುರಂದರ ಗುಜರನ್, ಜೊತೆ ಕೋಶಾಧಿಕಾರಿಯಾಗಿ ರವೀಂದ್ರ, ಕ್ರೀಡೆ ಶರತ್ ಮತ್ತು ಪ್ರಜಾಯ್, ಸಂಘಟನೆಯ ಜವಾಬ್ದಾರಿಯನ್ನು ಬಾಲಕೃಷ್ಣ ಶೆಟ್ಟಿ , ಸುಧಾಕರ್ ಬಂಗೇರ, ವಿಜಯ್, ಮನೋಜ್ ಅವರಿಗೆ ನೀಡಲಾಯಿತು.
ಸದಸ್ಯರು ಮೋಹನದಾಸ ಮತ್ತು ರವಿ ಸಾಲಿಯಾನ್. ಗುರುವಾರ ವಿಶೇಷ ಪೂಜೆ, ಅನ್ನ ಸಂತರ್ಪಣೆ:
ಸುರತ್ಕಲ್ ನಿಂದ ಕೆಲವೇ ದೂರದಲ್ಲಿರುವ ಶಿಬರೂರು-ಕಟೀಲು-ಸುರತ್ಕಲ್ ರಸ್ತೆ ಹಾದು ಹೋಗುವಾಗ ಸಿಗುವ ಪುಚ್ಚಾಡಿ ಸಾಯಿಬಾಬಾ ಮಂದಿರದಲ್ಲಿ ನಿತ್ಯ ಪೂಜೆ ಮತ್ತು ಪ್ರತಿ ಗುರುವಾರ ಭಕ್ತರ ಸೇವಾ ರೂಪದಲ್ಲಿ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ಕಳೆದು ಹತ್ತು ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ಭಕ್ತರು ತಮ್ಮ ತಮ್ಮ ವಿಶೇಷ ದಿನಗಳು ಅಂದರೆ ಹುಟ್ಟುಹಬ್ಬ, ಮದುವೆಯ ವಾರ್ಷಿಕೋತ್ಸವ ಮತ್ತು ಹರಕೆ ರೂಪದಲ್ಲಿ ಶ್ರೀ ಸಾಯಿಬಾಬಾ ಕ್ಷೇತ್ರದಲ್ಲಿ ಅನ್ನ ಸಂತರ್ಪಣೆ ಸೇವೆಯನ್ನು ನೀಡುತ್ತಿರುತ್ತಾರೆ. ಸೇವಾರ್ಥಿಗಳು ಸೇವೆ ನೀಡಲು ಇಚ್ಚಿಸಿದಲ್ಲಿ +91 81975 74625, 9743010099 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.