Saturday, February 15, 2025
Homeಉಡುಪಿಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ : ಜ.28ರಿಂದ 'ಭಜನಾ ಸಪ್ತಾಹ', ಫೆ.4ರಂದು 'ಬ್ರಹ್ಮಕಲಶೋತ್ಸವ' ಮತ್ತು...

ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ : ಜ.28ರಿಂದ ‘ಭಜನಾ ಸಪ್ತಾಹ’, ಫೆ.4ರಂದು ‘ಬ್ರಹ್ಮಕಲಶೋತ್ಸವ’ ಮತ್ತು ’65ನೇ ಭಜನಾ ಮಂಗಲೋತ್ಸವ’

ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಶ್ರೀ ವಿಠೋಬ ಭಜನಾ ಮಂದಿರದಲ್ಲಿ ಜ.28ರಿಂದ ಫೆ.2ರ ವರೆಗೆ ‘ಭಜನಾ ಸಪ್ತಾಹ’, ಫೆ.3ರಂದು ‘ಬ್ರಹ್ಮಕಲಶ ಪೂಜೆ’ ಮತ್ತು ಧಾರ್ಮಿಕ ವಿಧಿ ವಿಧಾನಗಳು ಹಾಗೂ ಫೆ.4ರಂದು ‘ಬ್ರಹ್ಮಕಲಶೋತ್ಸವ’ ಮತ್ತು ’65ನೇ ಭಜನಾ ಮಂಗಲೋತ್ಸವ’ ಜರಗಲಿದೆ ಎಂದು ಸಂಘದ ಆಡಳಿತ ಸಮಿತಿಯ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ತಿಳಿಸಿದ್ದಾರೆ.

’65ನೇ ಭಜನಾ ಮಂಗಲೋತ್ಸವ’ದ ಪ್ರಯುಕ್ತ ಜ.25ರಂದು ಸಂಘದ ‘ಶ್ರೀ ನಾರಾಯಣ ಗುರು ಸಮುದಾಯ ಭವನ’ದ ‘ಮಂಜುಶ್ರೀ ಭೋಜನ ಶಾಲೆ’ಗೆ ಸಂಘದ ಸದಸ್ಯರು ಮತ್ತು ದಾನಿಗಳ ನೆರವಿನಿಂದ ರೂ.2.50 ಲಕ್ಷ ವೆಚ್ಚದಲ್ಲಿ ‘ಶಾಶ್ವತ ಪಾತ್ರೆ ಪರಿಕರ’ಗಳನ್ನು ಸಮರ್ಪಿಸಲಾಗಿದೆ.

ಜ.28ರಂದು ಸಂಜೆ ಗಂಟೆ 7.00ಕ್ಕೆ ಪ್ರಾರಂಭಗೊಳ್ಳಲಿರುವ ‘ಭಜನಾ ಸಪ್ತಾಹ’ವು ಪ್ರತೀ ದಿನ ಸಂಜೆ ಗಂಟೆ 7.00ರಿಂದ 8.30ರ ವರೆಗೆ ವಿವಿಧ ಭಜನಾ ಮಂಡಳಿಗಳ ಭಜನಾ ಸೇವೆಯೊಂದಿಗೆ ಫೆ.2ರ ವರೆಗೆ ನಡೆಯಲಿದೆ.

ಫೆ.3ರ ಮಧ್ಯಾಹ್ನ ಗಂಟೆ 3.00ರಿಂದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಹಾಗೂ ಸಂಜೆ ಗಂಟೆ 6.00ರಿಂದ ‘ಕುಣಿತ ಭಜನೆ’ ಮತ್ತು ‘ಬ್ರಹ್ಮ ಕಲಶ ಪೂಜೆ’ ನಡೆಯಲಿದೆ.

ಫೆ.4ರ ಮುಂಜಾನೆ ಗಂಟೆ 5.00ರಿಂದ ‘ಗಣ ಹೋಮ’, ಬೆಳಿಗ್ಗೆ 7.35ಕ್ಕೆ ‘ಬ್ರಹ್ಮ ಕಲಶೋತ್ಸವ ಪೂಜೆ’, 10.35ಕ್ಕೆ ‘ಬ್ರಹ್ಮಕಲಶಾಭಿಷೇಕ’ ಹಾಗೂ ಬೆಳಿಗ್ಗೆ ಗಂಟೆ 11.00ಕ್ಕೆ ‘ಮಹಾ ಪೂಜೆ’ ನಡೆಯಲಿದೆ.

ಮಧ್ಯಾಹ್ನ ಗಂಟೆ 12.00ಕ್ಕೆ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಅವರು ’65ನೇ ಭಜನಾ ಮಂಗಲೋತ್ಸವ’ಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ ಗಂಟೆ 12.30ಕ್ಕೆ ‘ಅನ್ನ ಸಂತರ್ಪಣೆ’ ನಡೆಯಲಿದೆ. ರಾತ್ರಿ ಗಂಟೆ 8.30ಕ್ಕೆ ನಗರ ಭಜನೆ ಹಾಗೂ ರಾತ್ರಿ ಗಂಟೆ 12.00ಕ್ಕೆ ‘ಭಜನಾ ಮಂಗಲ’, ‘ಮಹಾ ಪೂಜೆ’ ಮತ್ತು ‘ಪ್ರಸಾದ ವಿತರಣೆ’ ನಡೆಯಲಿದೆ. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular