Thursday, July 25, 2024
Homeಧಾರ್ಮಿಕಕಟಪಾಡಿಯ ಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತ

ಕಟಪಾಡಿಯ ಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತ

ಮೂಲ್ಕಿ: ಕಟಪಾಡಿಯ ಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿ ಅವರು ತಮ್ಮ 20ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಪ್ರಯುಕ್ತ ಹಳೆಯಂಗಡಿಯ ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದರು.

ಅವರು ಮಾತನಾಡಿ, ಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಮೂಲಕ ವೇದ ಪಾಠದ ಶೈಕ್ಷಣಿಕ ಜ್ಞಾನವನ್ನು ಕಲಿಸುವ ಕರಾವಳಿಯ ಏಕೈಕ ಶಾಲೆಯಾಗಿ ಪರಿವರ್ತನೆಯಾಗಿದ್ದು ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಸಾಮಾಜಿಕ ಪರಿವರ್ತನೆಯನ್ನು ಧಾರ್ಮಿಕತೆಯ ಜ್ಞಾನದಿಂದ ಸಮಾಜದ ಸಂಘಟನೆಗೆ ಪೂರಕವಾಗಿ ನಡೆಯುವ ಈ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅವರು ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿ, ಜುಲೈ 21ರಿಂದ ಸೆಪ್ಟಂಬರ್ 18 ರ ತನಕ ಪಡುಕುತ್ಯಾರಿನಲ್ಲಿ ನಡೆಯುವ ಚಾತುರ್ಮಾಸ್ಯದಲ್ಲಿ ವಿಶ್ವಕರ್ಮ ಸಮಾಜದ ಕೇಂದ್ರದ ಸಚಿವರಾದ ಅಜಯ್ ತಪ್ತ ಅವರು ಭಾಗವಹಿಸುವ ನಿರೀಕ್ಷೆ ಇದೆ, ಸಮಾಜದ ಎಲ್ಲರೂ ತಮ್ಮ ಕುಟುಂಬಿಕರೊಂದಿಗೆ ಆಗಮಿಸಬೇಕೆಂದು ವಿನಂತಿಸಿದರು.

ಸ್ವಾಮೀಜಿಯವನ್ನು ವಿಶೇಷವಾಗಿ ಮಠದಿಂದ ಮೊಕ್ತೇಸರ ದಿವಾಕರ ಆಚಾರ್ಯ ಅವರು ಗೌರವಿಸಿದರು.

ನ್ಯಾಯವಾದಿ ಕೆ, ಪ್ರಭಾಕರ ಆಚಾರ್ಯ ಕೋಟೆಕಾರು, ಜಿ. ಟಿ. ಆಚಾರ್ಯ ಮುಂಬೈ, ಕಾಡಬೆಟ್ಟು ನಾಗರಾಜ ಆಚಾರ್ಯ, ಬಿ. ಸೂರ್ಯಕುಮಾರ್ ಹಳೆಯಂಗಡಿ, ದಿನೇಶ್ ಆಚಾರ್ಯ ಪಡುಬಿದ್ರಿ, ಕನ್ಯಾನ ಜನಾರ್ದನ ಆಚಾರ್ಯ, ಮಹಿಳಾ ಮಂಡಳಿಯ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ದಯಾನಂದ ಆಚಾರ್ಯ ಕೆಳಾರ್ಕಳ ಬೆಟ್ಟು, ಯೋಗೀಶ್ ಆಚಾರ್ಯ ಕರಂಬಳ್ಳಿ, ಬಿ. ಯೋಗಿಶ್ ಆಚಾರ್ಯ ಕೊಯಂಬತ್ತೂರು, ಪುರುಷೋತ್ತಮ ಆಚಾರ್ಯ ಪುತ್ತೂರು, ವಿಶುಕುಮಾರ್ ಆಚಾರ್ಯ ಉಚ್ಚಿಲ, ಶುಭ ಪುರುಷೋತ್ತಮ ಪುತ್ತೂರು, ರಮಾ ನವೀನ್ ಕಾರ್ಕಳ, ಲೋಲಾಕ್ಷ ಶರ್ಮ ಪಡುಕುತ್ಯಾರು ಮುಂತಾದವರು ಉಪಸ್ಥಿತರಿದ್ದರು.

ಪಡುಪಣಂಬೂರು ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನದ ಜಗದೀಶ್ ಆಚಾರ್ಯ ವಂದಿಸಿದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಕಾರ್ಯಕ್ರಮ ನಿರೂಪಿಸಿದರು.

ಸ್ವಾಮೀಜಿಯವರು ನಂತರ ಪಡುಪಣಂಬೂರು ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನಕ್ಕೆ ಭೇಟಿ ನೀಡಿದರು.

RELATED ARTICLES
- Advertisment -
Google search engine

Most Popular