ಮಂಗಳೂರು : ತುಳು ಪರಿಷತ್ ಇದರ ನೂತನ ಅಧ್ಯಕ್ಷರಾಗಿ ಕಂಚಿಲ ಶುಭೋದಯ ಆಳ್ವ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಧರಣೇಂದ್ರ ಕುಮಾರ್ , ಡಾ.ಮೀನಾಕ್ಷಿ ರಾಮಚಂದ್ರ ,ಚಂದ್ರಕಲಾ ರಾವ್ ,ಸುಮತಿ ಹೆಗ್ಡೆ ಹಾಗೂ ಗಣೇಶ್ ಪೂಜಾರಿ ಅವರು ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಬೆನೆಟ್ ಜಿ .ಅಮ್ಮನ್ನ ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಯಾಗಿ
ಜಿನೇಶ್ ಪ್ರಸಾದ್, ರಾಜಶ್ರೀ ಜೆ. ಪೂಜಾರಿ, ಉಮರ್ ಕುಂಞ ಸಾಲೆತ್ತೂರು ಆಯ್ಕೆಯಾಗಿದ್ದಾರೆ.
ಕೋಶಾಧಿಕಾರಿಯಾಗಿ ಯೋಗೀಶ್ ಕುಮಾರ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಗೆ ಡಾ.ವಾಸುದೇವ ಬೆಳ್ಳೆ, ಭರತೇಶ್ ಅಮೀನ್,ಇಸ್ಮಾಯಿಲ್ ಪೆರಿಂಜೆ, ಶಾಂತಲಾ ಗಟ್ಟಿ,
ಕವಿತಾ, ವೀಣಾ ಕಾಮತ್, ವೃಂದಾ ಪ್ರಭು, ಅಲ್ತಾಫ್, ವಿನುತಾ ಶೆಟ್ಟಿ, ಶಾಲಿನಿ ರೈ,
ರಮೇಶ್ ಮಂಚಕಲ್, ಡೋನಾಲ್ಡ್ ಪಿರೇರಾ, ಪ್ರೇಮನಾಥ್ ಶೆಟ್ಟಿ ಬಾಳ್ತಿಲ, ಓಸ್ವಾಲ್ಡ್ ಫೆರ್ನಾಂಡೀಸ್ , ರಾಜ ಚಂಡ್ತಿಮಾರ್, ದುರ್ಗಾ ಪ್ರಸಾದ್ , ವಿನಯ್ ಟಿ.ಎಸ್, ರಘು ಇಡ್ಕಿದು, ನ್ಯಾನ್ಸಿ ನೋರೋಹ್ನ, ರಾಕೇಶ್ ಕುಂದರ್ ಅವರು ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಡಾ.ಪ್ರಭಾಕರ್ ನೀರ್ ಮಾರ್ಗ , ಸ್ವರ್ಣ ಸುಂದರ್ ಹಾಗೂ ತಾರಾನಾಥ್ ಗಟ್ಟಿ ಕಾಪಿಕಾಡ್ ಆಯ್ಕೆಯಾಗಿದ್ದಾರೆ ಎಂದು ತುಳು ಪರಿಷತ್ ಪ್ರಕಟಣೆ ತಿಳಿಸಿದೆ.