Thursday, May 1, 2025
Homeಮಂಗಳೂರುಸಿದ್ದರಾಮಯ್ಯನವರ 16ನೇ ಬಜೆಟ್: ಎಲ್ಲ ವರ್ಗಗಳಿಗಾಗಿ ಸಮತೋಲನ ಮತ್ತು ಪ್ರಗತಿಗೆ ಹೊಸ ಮಾರ್ಗ

ಸಿದ್ದರಾಮಯ್ಯನವರ 16ನೇ ಬಜೆಟ್: ಎಲ್ಲ ವರ್ಗಗಳಿಗಾಗಿ ಸಮತೋಲನ ಮತ್ತು ಪ್ರಗತಿಗೆ ಹೊಸ ಮಾರ್ಗ

ಬಜೆಟ್:‌ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ 16ನೇ ಬಜೆಟ್‌ ಜನಸಾಮಾನ್ಯರ ಸಮತೋಲನದ ಎಲ್ಲಾ ವರ್ಗಗಳ ಏಳಿಗೆಯ ಪೂರಕ ಬಜೆಟ್‌ ನಾಲ್ಕು ಕೋಟಿ ಓಂಬತ್ತು ಲಕ್ಷ ಕೋಟಿಗಳ ಬಜೆಟ್‌ ರಾಜ್ಯದ ಪ್ರಗತಿಯ ದಿಕ್ಸೂಚಿಯನ್ನು ತೋರಿಸುತ್ತದೆ.

ರಾಜ್ಯದಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರಿಗೆ ಪಂಚ ಗ್ಯಾರಂಟಿಗಳಿಗೆ 51 ಕೋಟಿ ಮೀಸಲಿಡುವ ಮೂಲಕ ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಚುನಾವಣೆಯಲ್ಲಿ ಕೊಟ್ಟಂತಹ ಪ್ರನಾಳಿಕೆಯನ್ನು ಮುಂದುವರಿಸುವ ಜೊತೆಗೆ ರಾಜ್ಯದ ಏಲ್ಲಾ ವರ್ಗಗಳಿಗೆ ಪ್ರತ್ಯೇಕವಾಗಿ ವಿದ್ಯಾರ್ಥಿಗಳಗೆ ಶಿಕ್ಷಣಕ್ಕೆ, ಹಾಸ್ಟೆಲ್‌ಗಳಿಗೆ ರೈತರಿಗೆ, ಕಾರ್ಮಿಕರಿಗೆ ಅಲ್ಪಸಂಖ್ಯಾತರಿಗೆ ಏಲ್ಲಾ ವರ್ಗಗಳ ಜನರ ಅಭಿವೃದ್ದಿ ಮತ್ತು ಸಮಾಜವನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿರುತ್ತಾರೆ.

ಸಿದ್ದರಾಮಯ್ಯನವರ ಬಜೆಟ್‌ ಸಮಾಜಕ್ಕೆ ತನ್ನ 16ನೇ ಬಜೆಟ್‌ ಮಂಡನೆಯ ಸಂಪೂರ್ಣ ಅನುಭವನ್ನು ರಾಜ್ಯಕ್ಕೆ ನೀಡಿದ್ದಾರೆ. ಈ ಬಜೆಟ್‌ ಮೂಲಕ ರಾಜ್ಯದ ಅಭಿವೃದ್ದಿ ಪಥ ಮುಂದೆ ತಂದುಕೊಳ್ಳುತ್ತದೆ. ಮತ್ತು ಸಮಾಜದ ಶಾಂತಿ ಮತ್ತು ಏಕತೆಗೆ ಒಂದು ಕೊಂಡಿಯಾಗಿ ಮೂಡಿಬರುತ್ತದೆ. ರಾಜ್ಯದ ಎಲ್ಲಾ ವರ್ಗದ ಜನರಿಗೂ ರಾಜ್ಯದ ಸಂಪತ್ತು ಮುಟ್ಟಬೇಕು ಎಂಬಂತಹ ತತ್ವದಡಿಯಲ್ಲಿ ಈ ಬಜೆಟ್ ನ್ನು ಮಂಡಿಸಲಾಗಿದೆ. ಈ ಬಜೆಟ್‌ನ್ನು ಸ್ವಾಗತಿಸುತ್ತೇನೆ. ಬಹಳ ಹರ್ಷದಿಂದ ಈ ಬಜೆಟ್‌ನ್ನು ವಿಧಾನ ಪರಿಷತ್‌ ಶಾಸಕನಾದ ನಾನು ಐವನ್‌ ಡಿʼಸೋಜಾಈ ಬಜೆಟ್‌ನ್ನು ಸ್ವಾಗತಿಸುತ್ತೇನೆ.

RELATED ARTICLES
- Advertisment -
Google search engine

Most Popular