Friday, February 14, 2025
HomeUncategorizedಸಿದ್ಧಕಟ್ಟೆ: ಕೊಡಂಗೆ ವೀರ -ವಿಕ್ರಮ ಕಂಬಳ ಸಮಿತಿ ಲೆಕ್ಕಪತ್ರ ಮಂಡನೆ

ಸಿದ್ಧಕಟ್ಟೆ: ಕೊಡಂಗೆ ವೀರ -ವಿಕ್ರಮ ಕಂಬಳ ಸಮಿತಿ ಲೆಕ್ಕಪತ್ರ ಮಂಡನೆ


ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗೆ ರೂ ೧ಲಕ್ಷ ಕೊಡುಗೆ: ಸಂದೀಪ್ ಶೆಟ್ಟಿ ಪೊಡುಂಬ
ಬಂಟ್ವಾಳ:ಜಿಲ್ಲೆಯ ಕಂಬಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಸಮಿತಿ ವತಿಯಿಂದ ಒಂದೇ ವರ್ಷದಲ್ಲಿ ಮೂರು ಕಂಬಳ ಆಯೋಜನೆ ಸೇರಿದಂತೆ ವಿವಿಧ ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ರೂ ೧ಲಕ್ಷಕ್ಕೂ ಮಿಕ್ಕಿ ಮೊತ್ತದ ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆ ಹೋಟೆಲ್ ಅಶ್ವಿನಿ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪ್ರಸಕ್ತ ಸಾಲಿನ ಕಂಬಳ ಲೆಕ್ಕಪತ್ರ ಮಂಡನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೌರವ ಸಲಹೆಗಾರರಾದ ವಾಮದಪದವು ವಲಯ ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಲೊರೆಟ್ಟೊಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಕೀಲ ಸುರೇಶ ಶೆಟ್ಟಿ ಸಿದ್ಧಕಟ್ಟೆ, ಉದ್ಯಮಿ ಕಿರಣ್ ಕುಮಾರ್ ಮಂಜಿಲ, ಕಂಬಳ ಕೋಣಗಳ ಯಜಮಾನ ಬಾಬು ರಾಜೇಂದ್ರ ಶೆಟ್ಟಿ ವಿವಿಧ ಸಲಹೆ ನೀಡಿದರು. ಇದೇ ವೇಳೆ ಸಮಿತಿ ಕೋಶಾಧಿಕಾರಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಲೆಕ್ಕಪತ್ರ ಮಂಡಿಸಿದರು.
ಪದಾಧಿಕಾರಿಗಳಾದ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರಾಜೇಶ ಶೆಟ್ಟಿ ಕೊನೆರೊಟ್ಟು, ಜನಾರ್ದನ ಬಂಗೇರ ತಿಮರಡ್ಕ, ಸಂದೇಶ ಶೆಟ್ಟಿ ಪುಡುಂಬ, ಉಮೇಶ ಶೆಟ್ಟಿ ಕೊನೆರೊಟ್ಟು, ಸ್ಥಳದಾನಿ ಚಂದ್ರಶೇಖರ ಪೂಜಾರಿ, ಉಮೇಶ ಹಿಂಗಾಣಿ, ನವೀನ್ ಹೆಗ್ಡೆ ಮಂಚಕಲ್, ಮಧುಸೂಧನ ಸಾಲ್ಯಾನ್, ದೇವರಾಜ್ ಸಾಲ್ಯಾನ್ ಮತ್ತಿತರರು ಇದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು ಸ್ವಾಗತಿಸಿ, ವಂದಿಸಿದರು.

RELATED ARTICLES
- Advertisment -
Google search engine

Most Popular