ಬಂಟ್ವಾಳ:ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ ಸಾಲಿನಲ್ಲಿ ರೂ ೪,೪೫.೪೫ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ರೂ ೧.೬೮ ಕೋಟಿ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ ೧೨ ರಷ್ಟು ಡಿವಿಡೆಂಡ್ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದರು.
ಇಲ್ಲಿನ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಶನಿವಾರ ನಡೆದ ವಾಷರ್ಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.
ಒಟ್ಟು ೧,೫೪೭ ಮಂದಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ ೩೪.೫೫ ಕೋಟಿ ಮೊತ್ತದ ಸಾಲ ಮಂಗಳಾ ಕಿಸಾನ್ ಕಾಡರ್್ ಮೂಲಕ ವಿತರಿಸಲಾಗಿದೆ. ಶೇ ೩ ರ ಬಡ್ಡಿದರದಲ್ಲಿ ಒಟ್ಟು ೨೪೩ ಮಂದಿ ರೈತರಿಗೆ ರೂ ೭ ಕೋಟಿ ಸಾಲ ನೀಡಲಾಗಿದೆ. ಹೈನುಗಾರಿಕೆಗೆ ಶೂನ್ಯ ಬಡ್ಡಿದರದಲ್ಲಿ ರೂ ೨.೫೯ ಕೋಟಿ, ಜಮೀನು ಅಡಮಾನ ಮತ್ತು ವೈಯಕ್ತಿಕ ಸಾಲ ಸೇರಿದಂತೆ ಒಟ್ಟು ರೂ ೧೦.೮೦ ಕೋಟಿ ಸಾಲ ವಿತರಿಸಲಾಗಿದ್ದು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೆಚ್ಚುಗೆ ವ್ಯಕ್ತ ಪಡಿಸಿದೆ ಎಂದು ತಿಳಿಸಿದರು.
ಯಶಸ್ವಿನಿ, ನಿರುದ್ಯೋಗಿ ಮಹಿಳೆಯರಿಗೆ ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿ, ಪಡಿತರ ವಿತರಣೆ, ರಸಗೊಬ್ಬರ, ಕೃಷಿ ಪರಿಕರ ವಿತರಣೆ ನಡೆಸುತ್ತಿದ್ದು, ರಾಯಿ, ಮಾವಿನಕಟ್ಟೆ ಮತ್ತು ಆರಂಬೋಡಿ ಶಾಖೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.
ಇದೇ ವೇಳೆ ನಿವೃತ್ತ ಯೋಧರಾದ ರಾಜು ಪೂಜಾರಿ ಹಲಾಯಿ, ದಯಾನಂದ ಶೆಟ್ಟಿ, ಮೋಹನ್ ಜಿ.ಮೂಲ್ಯ ಇವರನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ ಅಳಕೆ, ನಿದರ್ೇಶಕರಾದ ಪದ್ಮರಾಜ್ ಬಲ್ಲಾಳ್ ಮವಂತೂರು, ಸಂದೇಶ್ ಶೆಟ್ಟಿ ಪೊಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ದಿನೇಶ್ ಪೂಜಾರಿ ಹುಲಿಮೇರು, ವೀರಪ್ಪ ಪರವ, ಜಾರಪ್ಪ ನಾಯ್ಕ, ಉಮೇಶ್ ಗೌಡ, ದೇವರಾಜ್ ಸಾಲ್ಯಾನ್, ಅರುಣಾ ಶೆಟ್ಟಿ, ಮಂದರಾತಿ ಎಸ್.ಶೆಟ್ಟಿ, ಮಾಧವ ಶೆಟ್ಟಿಗಾರ್, ನಿವೃತ್ತ ಮುಖ್ಯಶಿಕ್ಷಕ ನಾರಾಯಣ ನಾಯಕ್ ಕಪರ್ೆ, ಮಾಜಿ ಅಧ್ಯಕ್ಷ ಎ.ಗೋಪಿನಾಥ ರೈ, ಎಪಿಎಂಸಿ ಮಾಜಿ ಸದಸ್ಯ ರತ್ನಕುಮಾರ್ ಚೌಟ ಇದ್ದರು.
ಸಂಘದ ಸಿಇಒ ಆರತಿ ಶೆಟ್ಟಿ ವಾಷರ್ಿಕ ವರದಿ ವಾಚಿಸಿದರು. ನಿದರ್ೇಶಕ ಹರೀಶ್ ಆಚರ‍್ಯ ಸ್ವಾಗತಿಸಿ, ಸಿಬ್ಬಂದಿ ಸುಭಾಸ್ ಬಂಗೇರ ವಂದಿಸಿ, ಕರ‍್ಯಕ್ರಮ ನಿರೂಪಿಸಿದರು.