Monday, December 2, 2024
Homeಬಂಟ್ವಾಳಸಿದ್ಧಕಟ್ಟೆ: 'ರೋಟರಿ ಕಂಬಳ ಕೂಟ' ಸಮಾರೋಪ: ಕಂಬಳ ಆಯೋಜನೆ ಸಾಧನೆ : ಮಾಜಿ ಸಚಿವ ರೈ

ಸಿದ್ಧಕಟ್ಟೆ: ‘ರೋಟರಿ ಕಂಬಳ ಕೂಟ’ ಸಮಾರೋಪ: ಕಂಬಳ ಆಯೋಜನೆ ಸಾಧನೆ : ಮಾಜಿ ಸಚಿವ ರೈ


ಬಂಟ್ವಾಳ:ಜಿಲ್ಲೆಯಲ್ಲಿ ಹೊಸ ಕರೆ ನಿರ್ಮಿಸಿ ಕಂಬಳ ಕೂಟ ಆಯೋಜಿಸುವ ಮೂಲಕ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಸಾಧನೆ ಜೊತೆಗೆ ಅಂತರ್ ರಾಷ್ಟ್ರೀಯ ರೋಟರಿ ಕ್ಲಬ್ ಕಂಬಳ ಕೂಟ ಆಯೋಜಿಸುವ ಮೂಲಕ ಕಂಬಳಾಸಕ್ತ ಕೃಷಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಶನಿವಾರ ಸಮಾರೋಪಗೊಂಡ ಸಬ್ ಜ್ಯೂನಿಯರ್ ವಿಭಾಗದ ಹಗ್ಗ ಮತ್ತು ನೇಗಿಲು ವಿಭಾಗದ ‘ರೋಟರಿ ಕಂಬಳ ಕೂಟ’ ದಲ್ಲಿ ಅವರು ಮಾತನಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ಧಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ‘ಅವಿಭಜಿತ ಜಿಲ್ಲೆಯಲ್ಲಿ ಕಂಬಳ ಕ್ರೀಡೆಯಲ್ಲಿ ಪಾರದರ್ಶಕ ಫಲಿತಾಂಶ ಮತ್ತು ನಿಗದಿತ ಸಮಯಕ್ಕೆ ಮುಕ್ತಾಯಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯಾಗುತ್ತಿದೆ’ ಎಂದರು.
ರೋಟರಿ ಜಿಲ್ಲಾ ಗವರ್ನರ್ ಎನ್.ಪ್ರಕಾಶ್ ಕಾರಂತ್, ಬೂಡ ಅಧ್ಯಕ್ಷ ಬೇಬಿ ಕುಂದರ್, ಉದ್ಯಮಿ ಭುವನೇಶ್ ಪಚ್ಚಿನಡ್ಕ, ರೋಟರಿ ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗಾ, ಸಹಾಯಕ ಗವರ್ನರ್ ಮಹಮ್ಮದ್ ವಳವೂರು, ಜಯರಾಮ ರೈ, ರಾಜಗೋಪಾಲ ರೈ ಮಂಗಳೂರು, ಕೃಷ್ಣ ಶೆಟ್ಟಿ, ನಿರೂಪಕ ಕದ್ರ‍್ರಿ ನವನೀತ್ ಶೆಟ್ಟಿ, ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಉಪಾಧ್ಯಕ್ಷ ವಿಜಯ ಫೆರ್ನಾಂಡಿಸ್, ವಲಯಾಧ್ಯಕ್ಷ ಗಣೇಶ ಶೆಟ್ಟಿ ಸಿದ್ಧಕಟ್ಟೆ, ವಿವಿಧ ಕ್ಲಬ್ಬಿನ ಅಧ್ಯಕ್ಷರಾದ ಶಿವಯ್ಯ ಎಸ್.ಎಲ್., ಕಿಶೋರ್ ಕುಮಾರ್ ಬಿ.ಸಿ.ರೋಡು, ಟಿ.ಶೇಷಪ್ಪ ಮೂಲ್ಯ, ಮಾಜಿ ಅಧ್ಯಕ್ಷ ಅಶ್ವನಿ ಕುಮಾರ್ ರೈ, ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್ ಶುಭ ಹಾರೈಸಿದರು.
ಗ್ರಾ.ಪಂ.ಅಧ್ಯಕ್ಷ ಶೇಖರ ಶೆಟ್ಟಿ ಕುಕ್ಕಿಪಾಡಿ, ತಾ.ಪಂ.ಮಾಜಿ ಸದಸ್ಯರಾದ ರತ್ನ ಕುಮಾರ್ ಚೌಟ, ವಸಂತ ಕುಮಾರ್ ಅಣ್ಣಳಿಕೆ, ಪ್ರಭಾಕರ ಪ್ರಭು, ಪ್ರಮುಖರಾದ ಭಾಸ್ಕರ ಸುಬ್ಬಯ ಕೋಟ್ಯಾನ್, ಗಣೇಶ ಶೆಟ್ಟಿ ಗೋಳ್ತಮಜಲು, ದುರ್ಗಾದಾಸ್ ಶೆಟ್ಟಿ ಮಾವಂತೂರು, ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಕೆ.ರಮೇಶ್ ನಾಯಕ್ ರಾಯಿ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಪ್ರೀತಂ ರಾಡ್ರಿಗಸ್, ಸೀತಾರಾಮ ಶೆಟ್ಟಿ, ಸುರೇಶ್ ಕುಮಾರ್ ನಾವೂರು, ದೇವಪ್ಪ ಕುಲಾಲ್, ಪ್ರಕಾಶ್ ಕುಮಾರ್ ಜೈನ್ ಮತ್ತಿತರರು ಇದ್ದರು.
ಇದೇ ವೇಳೆ ವಿಜೇತ ಕೋಣಗಳ ಮಾಲೀಕರಿಗೆ ಚಿನ್ನದ ಪದಕ ಮತ್ತು ಓಟಗಾರರಿಗೆ ಟ್ರೋಫಿ ವಿತರಿಸಲಾಯಿತು.
ತೀರ್ಪುಗಾರ ವಿಜಯ ಕುಮಾರ್ ಕಂಗಿನ ಮನೆ ವಿಜೇತರ ಮಾಹಿತಿ ನೀಡಿದರು.
ಕ್ಲಬ್ಬಿನ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ಧಕಟ್ಟೆ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ ಶೆಟ್ಟಿ ಸೀತಾಳ ವಂದಿಸಿದರು. ಮಾಜಿ ಸಹಾಯಕ ಗವರ್ನರ್ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಮತ್ತು ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular