Wednesday, January 15, 2025
HomeUncategorizedಸೈಲಸ್ ಪದವಿ ಪೂರ್ವ ಕಾಲೇಜು, ಉಡುಪಿ : ಸೈಲಸ್ ಬ್ರೈನ್ ಬಝ್-2024

ಸೈಲಸ್ ಪದವಿ ಪೂರ್ವ ಕಾಲೇಜು, ಉಡುಪಿ : ಸೈಲಸ್ ಬ್ರೈನ್ ಬಝ್-2024


ಉಡುಪಿ ನಿಟ್ಟೂರಿನ ಸೈಲಸ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಬ್ರೈನ್ ಬಝ್ -2024 ಶನಿವಾರ ನಡೆಯಿತು. ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರ್ ಶಾಲಾ ರಸ ಪ್ರಶ್ನೆ ಸ್ಪರ್ಧೆಯಲ್ಲಿ 16ಕ್ಕೂ ಹೆಚ್ಚು ಶಾಲೆಗಳಿಂದ 48 ಕ್ಕೂ ಮಿಕ್ಕಿ ತಂಡಗಳು ಪಾಲ್ಗೊಂಡಿದ್ದು, ಗುರುಕುಲ ಪಬ್ಲಿಕ್ ಸ್ಕೂಲ್ ಕೋಟೇಶ್ವರ ತಂಡ ಪ್ರಥಮ ಸ್ಥಾನ ಹಾಗೂ ಜ್ಞಾನಸುಧಾ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕಾರ್ಕಳ ತಂಡ ದ್ವಿತೀಯ ಸ್ಥಾನ ಪಡೆದವು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಟಿ. ರಭಿ ಪುತಿರನ್ ಮಾತನಾಡಿ ರಸ ಪ್ರಶ್ನೆ ಮೆದುಳಿಗೆ ಕೆಲಸ ಕೊಡುವ ಚಟುವಟಿಕೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾ ಸಾಮರ್ಥ್ಯ, ಕಲಿಕಾ ಸಾಮರ್ಥ್ಯ, ವಿಮರ್ಶಾತ್ಮಕ ಚಿಂತನೆ ಹಾಗೂ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಎಂದರು. ಪ್ರಸ್ತುತ ಪೀಳಿಗೆಯ ಯುವಜನರಲ್ಲಿ ಯೋಚನಾ ಸಾಮರ್ಥ್ಯ, ಕೌಶಲ್ಯ ಹೆಚ್ಚಾಗಿದ್ದರೂ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
ಕಾಲೇಜಿನ ಶೈಕ್ಷಣಿಕ ನಿರ್ದೇಶಕಿ ಡಿಯೇರ್ಡ್ರಾ ಮಾಬೆನ್ ಮಾತನಾಡಿ ಜ್ಞಾನ ಕೇವಲ ಪುಸ್ತಕಕ್ಕೆ ಸೀಮಿತವಾಗಿರದೆ, ಪ್ರತಿದಿನ ಪ್ರತಿಯೊಂದರಿಂದ ತಿಳಿದುಕೊಳ್ಳುವ ನಿರಂತರ ಕಲಿಕೆಯ ಪ್ರಕ್ರಿಯೆಯಾಗಬೇಕು ಎಂದರು.
ಕ್ವಿಜ್ ಮಾಸ್ಟರ್ ಮಂಗಳೂರಿನ ಹವ್ಯಾಸಿ ಬರಹಗಾರ ಹಾಗೂ ಹಲವು ಶಾಲಾ ಕಾಲೇಜುಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟ ಅನುಭವಿ ಶಕ್ತಿದಾಸ್ ವಿದ್ಯಾರ್ಥಿಗಳಿಗೆ 5 ಸುತ್ತುಗಳ ಸ್ಪರ್ಧೆಯನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು.
ಕಾಲೇಜಿನ ಟ್ರಸ್ಟಿ ಶಾರ್ಲೆಟ್ ಮಾಬೆನ್, ಸೈಲಸ್ ಇಂಟರ್ನ್ಯಾಷನಲ್ ಸ್ಕೂಲಿನ ಪ್ರಿನ್ಸಿಪಾಲ್ ಜೆಸಿಂತಾ ಡಿ ಕೋಸ್ಟ, ಸೈಲಸ್ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಡಾ. ಅನ್ನಪೂರ್ಣ ರಾವ್ ಉಪಸ್ಥಿತರಿದ್ದರು. ಬ್ರಹ್ಮಾವರ ಗವರ್ನಮೆಂಟ್ ಹೈ ಸ್ಕೂಲಿನ ಶಿಕ್ಷಕಿ ಶ್ರೀಮತಿ ಕಾವೇರಿ ಹಾಗೂ ಕಾರ್ಕಳ ಜ್ಞಾನಸುಧಾ ಸ್ಕೂಲಿನ ವಿದ್ಯಾರ್ಥಿ ಕು ಧನ್ಯಶ್ರೀ ಇವರು ಕಾಲೇಜಿನ ಹಾಗೂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೆಲಿಟಾ ಹಾಗೂ ತಂಡದವರು ಪ್ರಾರ್ಥಿಸಿದರು,ಅಮೃತ ಸ್ವಾಗತಿಸಿದರು, ಅರ್ಪಿತಾ ಅತಿಥಿಗಳನ್ನು ಪರಿಚಯಿಸಿದರು, ನಿಶಿತಾ ವಂದಿಸಿದರು ಹಾಗೂ ಭಾವನಾ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular