Saturday, February 15, 2025
Homeಉಡುಪಿಹಿಂದೂ ಜನಜಾಗೃತಿ ಸಮಿತಿಯಿಂದ ಉಡುಪಿ ಮತ್ತು ಮಣಿಪಾಲದಲ್ಲಿ ಮೌನ ಪ್ರತಿಭಟನೆ

ಹಿಂದೂ ಜನಜಾಗೃತಿ ಸಮಿತಿಯಿಂದ ಉಡುಪಿ ಮತ್ತು ಮಣಿಪಾಲದಲ್ಲಿ ಮೌನ ಪ್ರತಿಭಟನೆ


ಉಡುಪಿ : ಕಳೆದ ಅನೇಕ ವರ್ಷಗಳಿಂದ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅತ್ಯಂತ ಅಮಾನವೀಯವಾಗಿ ಆಕ್ರಮಣಗಳಾಗುತ್ತಿದ್ದು ಹಿಂದೂಗಳನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡುವುದು, ಹಿಂದೂ ಸ್ತ್ರೀಯರನ್ನು  ಅತ್ಯಾಚಾರ ಮಾಡುವುದು, ಹಿಂದೂಗಳ ಆಸ್ತಿಯನ್ನು ವಶಪಡಿಸಿಕೊಳ್ಳುವುದು ನಿರಂತರ ನಡೆಯುತ್ತಿದೆ.ಅನೇಕ ದೇಶಗಳಲ್ಲಿ ಬಾಂಗ್ಲಾದೇಶದಲ್ಲಿ ಅಧ್ಯಾತ್ಮ ಪ್ರಸಾರ ಮಾಡುವ ಇಸ್ಕಾನ್ ಸಂಸ್ಥೆಯ ಮೇಲೆ ಅಕ್ರಮಣವನ್ನು ನಡೆಸಿ ಅದರ ಪ್ರಮುಖರ ಮೇಲೆ ದಾಳಿ ಮಾಡುವುದು, ಅವರನ್ನು ಅಕ್ರಮವಾಗಿ ಬಂಧಿಸುವಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿದ್ದು ಇದರ ಬಗ್ಗೆ ವಿಶ್ವದಾದ್ಯಂತ ತುಂಬಾ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.ಆದ್ಧರಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ  ದೌರ್ಜನ್ಯವನ್ನು‌ ಖಂಡಿಸಿ ಸರಕಾರವು ಬಾಂಗ್ಲಾದೇಶಿ ಹಿಂದೂಗಳಗೆ ಸುರಕ್ಷತೆಯನ್ನು ನೀಡಲು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಧರ್ಮ ಪ್ರೇಮಿಗಳು ಮತ್ತು ಹಿಂದುತ್ವನಿಷ್ಠರು ಒಂದಾಗಿ ಉಡುಪಿಯ ಶ್ರೀಕೃಷ್ಣ ಮಠದ ಮಹಾದ್ವಾರದ ಮುಂಭಾಗ ಮತ್ತು ಮಣಿಪಾಲದ ಬಬ್ಬುಸ್ವಾಮಿ ದೇವಸ್ಥಾನದ ಎದುರು ಶಾಂತಿಯುತವಾಗಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ಮಾಡಿದರು.

RELATED ARTICLES
- Advertisment -
Google search engine

Most Popular